ನಿಯಮಬಾಹಿರ ಹತ್ತು ಕೋಟಿ ಕ್ರಿಯಾಯೋಜನೆ ಸಿದ್ದ, ಅನುದಾನ ಲೂಟಿ

ರಾಯಚೂರು, ಮಾ.೨೮- ನಗರಾಭಿವೃದ್ದಿ ಪ್ರಾಧಿಕಾರ ಜನಪ್ರತಿನಿದಿನಗಳ ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ಟೆಂಡರ್ ಕರಿಯದೇ ಹತ್ತು ಕೋಟಿ ಇಪ್ಪತ್ತು ಲಕ್ಷ ರೂ ವೆಚ್ಚದ ಕ್ರಿಯಾಯೋಜನೆ ಸಿದ್ದಪಡಿಸಿ ಗುತ್ತೇದಾರರ ಮೂಲಕ ಅನುದಾನ ಲೂಟಿ ಮಾಡುವ ಹುನ್ನಾರ ನಡೆದಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಷಿರುದ್ದೀನ್ ಅವರು ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ನಗರದಲ್ಲಿ ನಿಯಮ ಬಾಹೀರವಾಗಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದ ಅವರು, ಭ್ರಷ್ಟಾಚಾರ ತಾಂಡಾವಾಡುತ್ತಿದೆ ಎಂದು ಆರೋಪಿಸಿದರು.
ಅನೇಕ ಭಾರಿ ಈ ಕುರಿತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರು ಕ್ರಮಕ್ಕೆ ಮುಂದಾಗಬೇಕಾದ ಜಿಲ್ಲಾಡಳಿತ ಜಾಣತನ ಪ್ರದರ್ಶಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಟೆಂಡರ್ ರದ್ದುಗೊಳಸದಿದ್ದಾರೆ ಪ್ರಾದೇಶಿಕ ಮಂಡಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ರಿಯಾಯೋಜನೆ ಸಿದ್ದಪಡಿಸಲು ಪ್ಯಾಕೇಜ್ ಮುಖಾಂತರ ಟೆಂಡರ್ ಕರೆದು ಕಾಮಗಾರಿಗಳು ಅನುಷ್ಠಾನಗೊಳಿಸಬೇಕು. ಆದರೆ, ಷರತ್ತು ಮತ್ತು ನಿಯಮ ಉಲ್ಲಂಘಸಿ ಜನಪ್ರತಿನಿದಿನಗಳು ಕಾಮಗಾರಿಗಳನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ವಹಿಸಿ ಗುತ್ತೇದಾರ ಮೂಲಕ ಕೋಟ್ಯಾಂತರ ಹಣ ಲೂಟಿ ಹೊಡೆಯುವ ಉದ್ದೇಶದಿಂದ ಕ್ರಿಯಾಯೋಜನೆ ಸಿದ್ದಪಡಿಸಿದ್ದಾರೆ ಎಂದು ಆರೋಪಿಸಿದರು.ಹೈಮಾಸ್ ದೀಪ ಅಳವಡಿಸುವುದು, ಉದ್ಯಾನವನ ಅಭಿವೃದ್ಧಿ, ಫೆನ್ಸಿಂಗ್ ಕಾಮಗಾರಿ, ಕಬ್ಬಿಣದ ಗ್ರಿಲ್ ಗಳು, ಸ್ಟೀಲ್ ಬ್ರಿಜ್‌ಗಳು, ವಿದ್ಯುದ್ದೀಪ ಸೇರಿದಂತೆ ಅನೇಕ ಕಾಮಗಾರಿಗಳು ನಿರ್ಮಾಣ ಸಂಸ್ಥೆಗಳಾದ ಕ್ಯಾಶುಟೆಕ್, ನಿರ್ಮಿತಿ ಕೇಂದ್ರ ಈ ಸಂಸ್ಥೆಗಳಿಗೆ ನಿರ್ವಹಣೆ ಮಾಡಲು ಬರುವದಿಲ್ಲ ಆದರೆ ಇದು ನಿಯಮ ಬಾಹಿರವಾಗಿದೆ ಎಂದು ಆರೋಪಿಸಿದರು.
ನಗರ ಅಭಿವೃದ್ಧಿ ಪಡಿಸುವುದೇ ನನ್ನ ಉದ್ದೇಶ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ವಹಿಸಿಕೊಟ್ಟ ಕಾಮಗಾರಿಗಳನ್ನು ತಕ್ಷಣವೇ ರದ್ದುಪಡಿಸಿ ಟೆಂಡರ್ ಮೂಲಕ ಕಾಮಗಾರಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು. ನಿಯಮ ಪ್ರಕಾರ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತೇದಾರರಿಗೆ ಟೆಂಡರ್ ವಹಿಸಬೇಕು. ಆದರೆ ನಿಯಮ ಉಲ್ಲಂಘಸಿ ನಿರ್ಮಿತಿ ಕೇಂದ್ರಗಳಿಗೆ ವಹಿಸಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ನಿಯಮವನ್ನು ಹೊರತುಪಡಿಸಿ ಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಗ್ರಾಮಗಳಿಗೆ ಈ ಅನುದಾನವನ್ನು ನೀಡಿದ್ದು, ನಿಯಮ ಉಲ್ಲಂಘನೆಯಾಗಿರುತ್ತದೆ. ರಾಯಚೂರು ನಗರ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿ ತೆಗೆದುಕೊಂಡ ಕಾಮಗಾರಿಗಳು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜೆಮ್ಸ್ ಮಂಜರ್ಲ, ಶಂಕರಪ್ಪ ಹೊಸೂರು ಇದ್ದರು.