ನಿಯಮಗಳು ಘೋಷಣೆಗಷ್ಟೇ ಸೀಮಿತ ಪಾಲನೆ ಹಿಂದೇಟು

ಮಾಸ್ಕ್, ಸಾಮಾಜಿಕ ಅಂತರ ಮಾಯ- ವಾರದ ಸಂತೆ ರದ್ದು
ದೇವದುರ್ಗ.ಮಾ.೨೩-ಕೊರೊನಾ ಮಹಾಮಾರಿ ಎರಡನೇ ಹಂತದ ಅಲೆ ಶುರುವಾಗಿದೆ. ಜಿಲ್ಲಾಡಳಿತ ಸೂಚನೆಯ ನಿಯಮಗಳು ಘೋಷಣೆಗಷ್ಟೇ ಸಿಮೀತ ಪಾಲನೆ ಜನರು ಹಿಂದೇಟು ಹಾಕಲಾಗುತ್ತಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತೆ ಕ್ರಮವಾಗಿ ತಾಲೂಕ ಆಡಳಿತ ಶನಿವಾರ ನಡೆಯುವ ವಾರದ ಸಂತೆ ರದ್ದು ಮಾಡಲಾಗಿದೆ. ಜಾನುವಾರು, ಕುರಿ, ಮೇಕೆ, ಕೋಳಿ ಸಂತೆಯೂ ರದ್ದುಗೊಳಿಸಲಾಗಿದೆ.
ಪ್ರತಿಯೊಬ್ಬರು ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಪುರಸಭೆ ಇಲಾಖೆಯಿಂದ ಆಟೋದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಭೆ ಸಮಾರಂಭಕ್ಕೆ ಇಂತ್ತೀಷ್ಟು ಜನ ಸೇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಲಾಗಿದೆ. ನಿಯಮಗಳು ಜಾರಿಯಲ್ಲಿವೆ ಪಾಲನೆ ನಾಮಕೇವಾಸ್ತೆ ಎಂಬಂತೆ ವಾತಾವರಣ ನಿರ್ಮಾಣವಾಗಿದೆ. ಎರಡನೇ ಹಂತದ ಕೊರೊನಾ ಅಲೆ ಎಲ್ಲಲ್ಲಿ ಶುರುವಾಗಿದೆ. ಪಟ್ಟಣದಲ್ಲಿರುವ ಬಹುತೇಕ ಬ್ಯಾಂಕ್‌ಗಳ ಮುಂಭಾಗದಲ್ಲಿ ಮಾಸ್ಕ್ ಇಲ್ಲದೇ ಗ್ರಾಹಕರಿಗೆ ಪ್ರವೇಶವಿಲ್ಲ ಎಂದು ನಾಮಫಲಕ ಹಾಕಲಾಗಿದೆ. ದುರಂತ ಎಂದರೇ ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿಗಳೇ ಮಾಸ್ಕ್ ಹಾಕುತ್ತಿಲ್ಲ. ಡಾ.ಬಿ.ಅಂಬೇಡ್ಕರ್ ವೃತ್ತದ ಸ್ವಲ್ಪ ಅಂತರದಲ್ಲಿರುವ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಸ್ಥಳದ ಕೊರತೆ ಮಧ್ಯೆ ಒಬ್ಬರ ಮೇಲೆ ಮೊತ್ತೊಬ್ಬರು ಬಿದ್ದು, ಗ್ರಾಹಕರು ಕೆಲಸ ಕಾರ್‍ಯಗಳು ಮಾಡಿಕೊಳ್ಳಬೇಕಾದಂತ ಸ್ಥಿತಿ ಬಂದಿದೆ.
ಮಾಸ್ಕ್ ಕಡ್ಡಾಯ ಎಂದು ನಾಮಫಲಕ ಹಾಕಲಾಗಿದೆ. ಬ್ಯಾಂಕ್ ವ್ಯವಸ್ಥಾಪಕ ಸಿಬ್ಬಂದಿಗಳು ಗ್ರಾಹಕರಲ್ಲಿ ಮಾಸ್ಕ್, ಸಾಮಾಜಿಕ ಅಂತರ ಎಲ್ಲವೊ ಮಾಯ ಎಂಬಂತಾಗಿದೆ. ಅತಿ ಹೆಚ್ಚು ದೊಡ್ಡಿ, ತಾಂಡಾ, ಬಿಸಿಊಟ ಅಡುಗೆ ಸಿಬ್ಬಂದಿಗಳು ಗ್ರಾಹಕರಾಗಿದ್ದಾರೆ. ಕೆಲಸ ಕಾರ್‍ಯದ ನಿಮಿತ್ತ ನಿತ್ಯ ವೃದ್ಧರು ವ್ಯಯೋವೃದ್ಧರು ಆಗಮಿಸುತ್ತಾರೆ. ಈಗೀರುವಾಗಲೇ ಕೊರೊನಾ ಕೆಲ ನಿಮಯಗಳು ಬ್ಯಾಂಕ್‌ನಲ್ಲಿ ಪಾಲನೆ ಆಗುತ್ತಿಲ್ಲ. ಬ್ಯಾಂಕಿನಲ್ಲಿ ಅಧಿಕಾರಿಗಳು ಸಿಬ್ಬಂದಿಗಳೇ ಮಾಸ್ಕ್ ಧರಿಸದೇ ಗ್ರಾಹಕರ ಮೇಲೆ ಬೊಟ್ಟು ತೊರಿಸಲಾಗುತ್ತಿದೆ.
ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ನಿಯಮಗಳ ಮಾರ್ಗಸೂಚನೆಗಳು ಪಾಲನೆ ಹಿಂದೇಟು ಹಾಕುವಂತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು. ಎರಡನೇ ಹಂತದ ಕೊರೊನಾ ಅಲೆ ಭೀತಿ ಆರೋಗ್ಯ ಇಲಾಖೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಜಾಗೃತಿ ಪ್ರಚಾರದಲ್ಲಿ ತೊಡಗಿದೆ. ಜನರಲ್ಲಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಪುರಸಭೆ ಇಲಾಖೆಯಿಂದ ಕಳೆದ ಎರಡ್ಮೂರು ದಿನದಿಂದ ಆಟೋದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾ ಮಹಾಮಾರಿ ಎಚ್ಚತ್ತಬೇಕಾದಂತ ಸಾರ್ವಜನಿಕರೇ ಮಂಡು ದಾರಿ ಹಿಡಿದಿದ್ದಾರೆ.
ದೇವದುರ್ಗ: ಪಟ್ಟಣದ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕಾರಿಗಳು ಸಿಬ್ಬಂದಿಗಳು, ಗ್ರಾಹಕರಲ್ಲಿ ಮಾಸ್ಕ್ ಮಾಯ

ಕೋಟ
ಎರಡನೇ ಹಂತದ ಕೊರೊನಾ ಅಲೆ ಭೀತಿ ಹಿನ್ನೆಲೆ ಮುಂಜಾಗೃತೆ ಕ್ರಮವಾಗಿ ಶನಿವಾರ ನಡೆಯಬೇಕಾದಂತ ವಾರದ ಸಂತೆ ರದ್ದುಗೊಳಿಸಲಾಗಿದೆ. ಜನರಲ್ಲಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಆಟೋದಲ್ಲಿ ಪ್ರಚಾರ ನಡೆಸಲಾಗುತ್ತಿದೆ.
ಮಧುರಾಜ ಯಾಳಗಿ ತಹಶೀಲ್ದಾರ