ನಿಯಂತ್ರಣ ತಪ್ಪಿದ ಚೀಪ್ ಮರಕ್ಕೆ ಡಿಕ್ಕಿ : ಎಎಸ್‍ಐ, ಹೆಡ್ ಕಾನ್ಸ್‍ಟೇಬಲ್ ಸಾವು

ಮೈಸೂರು, ನ.12: ರಾತ್ರಿ ಗಸ್ತಿನಲ್ಲಿದ್ದ ಪೆÇಲೀಸ್ ಜೀಪ್ ಚಾಲಕ ನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಎಸ್‍ಐ ಹಾಗೂ ಹೆಡ್ ಕಾನ್‍ಸ್ಟೇಬಲ್ ಸಾವಿಗೀಡಾಗಿರುವ ಘಟನೆ ಕೆ.ಆರ್.ನಗರ ತಾಲ್ಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ನಡೆದಿದೆ.
ಮೃತರನ್ನು ಕೆ.ಆರ್.ನಗರ ಪೆÇಲೀಸ್ ಠಾಣೆಯ ಎಎಸ್‍ಐ ಮೂರ್ತಿ ಹಾಗೂ ಹೆಡ್ ಕಾನ್ಸಟೇಬಲ್ ಶಾಂತಕುಮಾರ್ ಎಂದು ಗುರುತಿಸಲಾಗಿದೆ.
ಇಲಾಖೆಯ ಜೀಪಿನಲ್ಲಿ ರಾತ್ರಿ ಸರ್ಕಲ್ ನೈಟ್ ರೌಂಡ್ ಕರ್ತವ್ಯ ನಿರ್ವಹಿಸಿಕೊಂಡು ಸಾಲಿಗ್ರಾಮ ಪೆÇಲೀಸ್ ಠಾಣೆಯ ಕಡೆಯಿಂದ ಕೆ.ಆರ್.ನಗರದ ಕಡೆಗೆ ಬರುತ್ತಿರುವಾಗ ಬೆಳ್ಳಗಿನ ಜಾವ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಶವಾಗಾರ ಮತ್ತು ಘಟನಾ ಸ್ಥಳಕ್ಕೆ ಮೈಸೂರು ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸೌತ್ ಡಿವೈಎಸ್ ಪಿ.ಸುಮಿತ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.