ನಿಯಂತ್ರಣ ತಪ್ಪಿದ ಕಾರುಪಲ್ಟಿ

ದಾವಣಗೆರೆ.ನ.೯; ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ದಾವಣಗೆರೆಯ ಮಿಟ್ಲಾಕಟ್ಟೆ ಗ್ರಾಮದ ಬಳಿ ನಡೆದಿದೆ. ಎದುರಿಗೆ ಬಂದ ಬೈಕ್ ಗೆ ಸೈಡ್ ನೀಡಲು ಹೋಗಿ ಕಾರು ನಿಯಂತ್ರಣ ತಪ್ಪಿದೆ.ಕಾರಿನಲ್ಲಿದ್ದ ಚಾಲಕನಿಗೆ ಗಾಯವಾಗಿದೆ.ಗಾಯಾಳು ಚಾಲಕನಿಗೆ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕಾರು ಮಿಥುನ್ ಎನ್ನುವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.