ನಿಯಂತ್ರಣಕ್ಕೆ ಬಾರದ ಬ್ಲಾಕ್ ಫಂಗಸ್ ಈ ವರಗೆ 19 ಜನ ಸಾವು

FILE PHOTO: Patients suffering from the coronavirus disease (COVID-19) get treatment at the casualty ward in Lok Nayak Jai Prakash (LNJP) hospital, amidst the spread of the disease in New Delhi, India April 15, 2021. REUTERS/Danish Siddiqui/File Photo

ಬಳ್ಳಾರಿ ಜೂ 10 : ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿದೆಯಾದರೂ, ಬ್ಲಾಕ್ ಫಂಗಸ್ ಸೋಂಕು ಹೆಚ್ವುತ್ತಲೇ ಇದೆ.
ಶಂಕಿತ ಮತ್ತು ಖಚಿತ ಪ್ರಕರಣಗಳು ಸೇರಿ 120ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣ ದಾಖಲಾಗಿವೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 104 ಬ್ಲಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಒಂದೇ ದಿನ ಎಂಟು ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಓಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಈ ಬ್ಲಾಕ್ ಫಂಗಸ್ ಗೆ ಈವರೆಗೂ 19 ಜನ ಬಲಿಯಾಗಿದ್ದಾರೆ.
ಈ ಸೋಂಕು‌ ನಿವಾರಣೆಗೆ ಅಗತ್ಯವಾದಷ್ಟು ಔಷಧಿ ಸರ್ಕಾರದಿಂದ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ದೊರೆಯುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.