ನಿಮ್ಮ ಸೇವೆಗಾಗಿ ನನಗೆ ಮತನೀಡಿ ಪ್ರಭಂಜನ್ ಕುಮಾರ್

ಬಳ್ಳಾರಿ, ಏ.17: ನಮ್ಮ ಮನೆತನದಲ್ಲಿ ತಾತ, ಮುತ್ತಾತರ ಆದಿಯಾಗಿ ಬಳ್ಳಾರಿ ನಗರದ ಜನತೆಯ ಸೇವೆಯನ್ನು ಜನಪ್ರತಿನಿಧಿಗಳಾಗಿ ಮಾಡಿದ್ದಾರೆ.
ನನ್ನನ್ನು ನೀವೂ ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆಗೆ ಒಂದು ಅವಕಾಶ ಕಲ್ಪಿಸಿಕೊಡಿ ಇದು ನಗರದ 3ನೇ ವಾರ್ಡಿನ ಸ್ವತಂತ್ರ ಅಭ್ಯರ್ಥಿ ಮುಂಡ್ಲೂರು ಪ್ರಭಂಜನ ಕುಮಾರ್ ಇಂದು ಮತದಾರರಲ್ಲಿ ಮನವಿ ಮಾಡಿದ ಪರಿ.
ವಾರ್ಡಿನ ಗೊಲ್ಲರಹಟ್ಟಿಯಲ್ಲಿ ಬೆಳಿಗ್ಗೆ ಮನೆ ಮನೆಗೆ ತೆರಳಿ ನಮ್ಮ ಮುಂಡ್ಲೂರು ಮನೆತನದಿಂದ ನಗರದಲ್ಲಿ ಶಾಸಕರು, ಸಚಿವರೂ ಆಗಿ ನಗರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಕುಡಿಯಾಗಿ ಯುವ ಉತ್ಸಾಹಿಯಾಗಿ ಮೊದಲ ಬಾರಿಗೆ ಜನಪ್ರತಿನಿಧಿ ಆಗಬೇಕೆಂಬ ಬಯಕೆಯಿಂದ ರಾಜಕೀಯಕ್ಕೆ ಕಾಲಿಟ್ಟಿದ್ದೇನೆ. ನೀವು ಆಶೀರ್ವದಿಸಿ ಜಯಿಸಬೇಕೆಂದು ಮತದಾರರಿಗೆ ಕೈಜೋಡಿಸಿ ಮನವಿ ಮಾಡಿದ್ದು ಗಮನ ಸೆಳೆಯಿತು.
ವಾರ್ಡಿನ ಈ ಹಿಂದಿನ ಕಾರ್ಪೊರೇಟರ್ ಫರ್ವಿನ್ ಬಾನು ಅವರೊಂದಿಗೆ ಮನೆ ಮನೆಗೆ ತೆರಳುತ್ತಿದ್ದಂತೆ ಮತದಾರರು ಅಭ್ಯರ್ಥಿಯನ್ನು ಬರಮಾಡಿಕೊಂಡು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಆಯ್ಕೆ ಮಾಡಿ ಪಾಲಿಕೆಯಲ್ಲಿ ನಿಮ್ಮ ಸಮಸ್ಯೆಗಳ ಇತ್ಯರ್ಥ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.