ನಿಮ್ಮ ಸದೃಢ ಆರೋಗ್ಯವೇ ನಮ್ಮ ಗುರಿ :ಡಾ. ವೀರಭದ್ರಗೌಡ

ಶಹಾಪುರ:ಮಾ.2:ತಾಲೂಕಿನ, ಉಕ್ಕಿನಾಳ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೇರೆ ಬೇರೆ ಕಾಯಿಲೆ ಇದ್ದರೆ ತಕ್ಷಣ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಟಿಬಿ ಕ್ಯಾನ್ಸರ್ ಹೃದಯದ ಕಾಯಿಲೆ ಹಾಗೂ
ವ್ಯಕ್ತಿಗೆ ನೇತ್ರ ಬಹುಮುಖ್ಯ ಅಂಗ, ಯಾರು ಅದರ ಬಗ್ಗೆ ನಿಷ್ಕಾಳಜಿ ವಹಿಸಬಾರದು. ನೇತ್ರದ ಸಮಸ್ಯೆಯಿದ್ದರೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಬಿಜೆಪಿ ಮುಖಂಡ ಡಾ.ವೀರಭದ್ರಪ್ಪ ಹೊಸಮನಿ ತಿಳಿಸಿದರು.

ತಾಲ್ಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆರ್ಶೀವಾದಟ್ರಸ್ಟ್ ಹಾಗೂ ಬೆಂಗಳೂರಿನ ವೈದೇಹಿ ಮತ್ತು ಸಂಜೀವಿನಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಬಡವರಿಗೆ ಉಚಿತ ಆರೋಗ್ಯ ಶಿಬಿರ ತುಂಬಾ ನೆರವಾಗಲಿದೆ.

ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ಶಿಬಿರದ ಜತೆಗೆ ಅಗತ್ಯವೆನೆಸಿದರೆ ಶಸ್ತ್ರ ಚಿಕಿತ್ಸೆಯನ್ನು ನಮ್ಮ ಆರ್ಶೀವಾದ ಟ್ರಸ್ಟ್ ಅಡಿಯಲ್ಲಿ ನೆರವೇರಿಸಲಾಗುವುದು ಎಂದು ಅವರು ಅಭಯ ನೀಡಿದರು. ಯಾವುದೇ ಸದ್ದು ಗದ್ದಲ ವಿಲ್ಲದೆ ಸಮಾಜದ ಬಡಜನರ ಪಾಲಿಗೆ ದೇವರಂತೆ ಬಂದು ಅವರ ಆರೋಗ್ಯ ಬಗ್ಗೆ ಅಪಾರವಾದ ಕಾಳಜಿ ವಹಿಸಿ ಶಹಾಪುರ ಮತಕ್ಷೇತ್ರದ ತುಂಬಾ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿ ಶೀಘ್ರವಾಗಿ ಪರಿಹಾರ ಮಾಡುವ ಕೆಲಸ ಕಾರ್ಯಗಳು ಮಾಡುತ್ತಾರೆ ಅದಕ್ಕೆ ಡಾ ವೀರಭದ್ರಗೌಡ ಅವರ ಬಗ್ಗೆ ಅಭಿಮಾನ ಗೌರವ ಇದೆ ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಈಗಾಗಲೇ ಹಲವಾರು ಗ್ರಾಮಗಳಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅವರಿಗೆ ಶಸ್ತ್ರಚಿಕಿತ್ಸೆ ಕ್ಯಾನ್ಸರ್ ಚಿಕಿತ್ಸೆ ಹೃದಯಾಘಾತ ಚಿಕಿತ್ಸೆ ಕಣ್ಣಿನ ಆಪರೇಶನ್ ಮಾಡಿಸಿಕೊಂಡು ಬಂದಿದ್ದಾರೆ ಇನ್ನೂ ಯಾರಾದರೂ ಇದ್ದರೆ ಅವರಿಗೂ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಲಾಗುತ್ತದೆ ಅದಕ್ಕೆ ಪ್ರತಿಯೊಬ್ಬ ನಿಮ್ಮ ಊರಿಗೆ ಬಂದಾಗ ಎಲ್ಲಾರೂ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಉಕ್ಕಿನಾಳ ಗ್ರಾಮದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ 300ಕ್ಕೂಹೆಚ್ಚು ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು.

ಬಿಜೆಪಿ ಹಿರಿಯ ಮುಖಂಡ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಯಲ್ಲಯ್ಯ ನಾಯಕ ವನದುರ್ಗ, ಗ್ರಾ.ಪಂ.ಅಧ್ಯಕ್ಷೆ ಭೀಮಾಬಾಯಿ, ಶಿವರಾಜ ಅಂಗಡಿ, ರಾಜಶೇಖರಗೌಡ, ಮಲ್ಲಿಕಾರ್ಜುನ, ಬಸವರಾಜ ಬಡಿಗೇರ, ಸಂಗಪ್ಪ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.