ನಿಮ್ಮ ಸಂಕಷ್ಟಗಳಿಗೆ ಸದಾ ಸ್ಪಂದಿಸುವೆ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20: ಪುಟ್ ಬಾಲ್ ಗೆ ಮತ ನೀಡಿ ನನ್ನನ್ನು ಆಯ್ಕೆ ಮಾಡಿ ಮಹಿಳೆಯರ ಸಂಕಷ್ಟಗಳಿಗೆ ನಾನು ಸದಾ ಸ್ಪಂದಿಸುವೆ ಎಂದು ನಗರ ಕ್ಷೇತ್ರದ ಕೆ.ಆರ್.ಪಿ.ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ಮತದಾರರಿಗೆ ಭರವಶೆ ನೀಡಿದರು.
ಅವರು ಇಂದು ಇಲ್ಲಿನ  5 ನೇ ವಾರ್ಡಿನ ಮುಂಡರಗಿ ಪ್ರದೇಶದ  ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ವೇಳೆ ಸೇರಿದ್ದ ಮಹಿಳೆಯರು, ವೃದ್ದರೊಂದಿಗೆ ಸಮಾಲೋಚಿಸಿ ಮಾತನಾಡುತ್ತಿದ್ದರು.
ನಾನು ಒಂಟಿಯಾಗಿ ನಡೆಸುತ್ತಿರುವ ಹೋರಾಟಕ್ಕೆ ನಿಮ್ಮ ಬೆಂಬಲ ಇರಲಿ ಎಂದಾಗ ಮಹಿಳೆಯರು  ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಹಂಪಿ ರಮಣ,  ಮಲ್ಲಿಕಾರ್ಜುನಚಾರ್, ಬೆಲ್ಲಂ ವಾಸುರೆಡ್ಡಿ, ಪುಷ್ಪಾವತಿ, ರೂಪ ,ರಾಜೇಶ್ವರಿ, ಪಕ್ಷದ ಮುಖಂಡರಾದ  ಬ್ರಹ್ಮಯ್ಯ ನಾಯ್ಡು, ಪ್ರಸಾದ್, ಗೋಪಾಲ್, ಸ್ವಾಮಿ , ಪುರುಷ, ನಾಗೇಂದ್ರ,  ಸೊಹೈಲ್ ಶಶಿ, ಗೌಸ್ ಪೀರ್ ಮೊದಲಾದವರು ಇದ್ದರು.

One attachment • Scanned by Gmail