ನಿಮ್ಮ ಮನೆಗಳಿಗೆ ಪಟ್ಟಾ ಕೊಟ್ಟಿದ್ದನ್ನು ನೆನಪಿಸಿಕೊಂಡು ಮತ ನೀಡಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ಹಲವು ದಶಕಗಳಿಂದ  ನೀವು ಮನೆ ಕಟ್ಟಿಕೊಂಡು ವಾಸವಿದ್ದರೂ ಅದಕ್ಕೆ ಪಟ್ಟಾ ಇರಲಿಲ್ಲ. ಕೊಡುತ್ತೇವೆಂದು ಕಾಂಗ್ರೆಸ್ ನವರು ಓಟು ಹಾಕಿಸಿಕೊಂಡರೇ ಹೊರೆತು ಕೊಡಲಿಲ್ಲ‌ ನಾವು ಕೊಟ್ಟ ಮಾತಿನಂತೆ ನಿಮ್ಮ ಮನೆಗಳಿಗೆ ಪಟ್ಟಾ ನೀಡಿದೆ. ಅದನ್ನು ನೆನಪಿಸಿಕೊಂಡು ಬಿಜೆಪಿಗೆ ಮತ ನೀಡಿ ಎಂದು ನಗರ ಶಾಸಕ‌ ಗಾಲಿ  ಸೋಮಶೇಖರ ರೆಡ್ಡಿ ಮತದಾರರಿಗೆ ಮನವಿ‌ ಮಾಡಿದರು.
ಅವರು ನಗರದಲ್ಲಿಂದು ಬೆಳಿಗ್ಗೆ 38 ನೇ ವಾರ್ಡಿನ  ಮೇದಾರ್ ಓಣಿ, ಕುಟ್ಟಿ ಸರ್ಕಲ್, ಕಡೆಗಳಲ್ಲಿ ಹಾಗೂ ಬಸವನಕುಂಟೆ ಪ್ರದೇಶಗಳಲ್ಲಿ ಮನೆ ಮನೆಗೆ ತರಳಿ ಮತಯಾಚನೆ ಮಾಡಿ  ಮನವಿ ಮಾಡಿದರು
ಗುಡಿಸಲು ಮುಕ್ತ ನಗರ ಮಾಡಲು ಐದು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ.
ಬರುವ ದಿನಗಳಲ್ಲಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನಿಮ್ಮ ಮತ ನಮಗೆ ದೇಶದ ಹಿತಕ್ಕೆ ಎಂದರು.
ಮಾಜಿ ಸಂಸದ ಫಕೀರಪ್ಪ, ಅನೂಪ್ ಕುಮಾರ್, ಸುಧಾಕರ್, ಸೀನ, ಉಮೇಶ್ ಮೊದಲಾದವರು ಪ್ರಚಾರಲ್ಲಿ ಪಾಲ್ಗೊಂಡಿದ್ದರು.