ನಿಮ್ಮ ಮತ ಮಾರಾಟದ ವಸ್ತುವಲ್ಲ 

ಚಿತ್ರದುರ್ಗ. ಏ.೭; ಮನುಷ್ಯ ತನ್ನ ಮತವನ್ನ ಮಾರಿಕೊಂಡಾಗ ಪ್ರಜಾಪ್ರಭುತ್ವ ತನ್ನ ಮೌಲ್ಯವನ್ನು ಕಳೆದುಕೊಂಡು ಕುಸಿಯ ತೊಡಗುತ್ತದೆ ಹಾಗಾಗಿ ಜನರು ಮತವನ್ನ ಮಾರಾಟ ಮಾಡುವುದುಕಿಂತ ಅದನ್ನು ಪ್ರಾಮಾಣಿಕವಾಗಿ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಎಚ್ ಕೆ ಎಸ್ ಸ್ವಾಮಿ ತಿಳಿಸಿದರು.ಅವರು ಚಿತ್ರದುರ್ಗ ನಗರದ ಬಳಿ ಇರುವ ಇಂಗಳದಾಳ್ ಗ್ರಾಮದಲ್ಲಿ ಸಿದ್ದಿ ಸಮಾಧಿ ಯೋಗ ಶಿಬಿರದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಬಡತನ ಹೆಚ್ಚಾಗಿರುವುದರಿಂದ ಜನರಿಗೆ ಸ್ವಲ್ಪ ಆಮಿಷ ಒಡ್ಡಿದರು ಸಹ ತಮ್ಮ ಮತವನ್ನು ಮಾರಿಕೊಳ್ಳುವ ಸಂಭವಗಳು ಹೆಚ್ಚಾಗಿರುತ್ತದೆ ಹಾಗಾಗಿ ಜನರನ್ನ ಆರ್ಥಿಕವಾಗಿ ಸಬಲೀಕರಣ ಗೊಳಿಸುವ ಕೆಲಸ ಅವಿರತವಾಗಿ ಮಾಡುತ್ತಿರಬೇಕು. ಜನರನ್ನ ಆಮಿಷಕ್ಕೆ ಒಳಪಡಿಸುವಂತಹ ಪಕ್ಷಗಳು, ವ್ಯಕ್ತಿಗಳು ಸಹ ಬದಲಾಗಬೇಕಾಗಿದೆ. ಜನರನ್ನ ಭ್ರಷ್ಟರನ್ನಾಗಿಸಿದಾಗ ನಾವು ನಿಜವಾದ ಗಟ್ಟಿಯಾದ ಸರ್ಕಾರವನ್ನು ರಚಿಸಲು ಸಾಧ್ಯವಾಗುವುದಿಲ್ಲ, ಭ್ರಷ್ಟಾಚಾರಕ್ಕೆ ಮೂಲ ಕಾರಣ ಚುನಾವಣೆಗಳಲ್ಲಿ ನಡೆಯುವ   ಅವ್ಯವಾರವೇ ಕಾರಣ, ಜನರನ್ನ ಜಾಗೃತೆ ಗೊಳಿಸುವ ಕಾರ್ಯವು ಎಲ್ಲಾ ಕಡೆಯೂ ಅವಿರತವಾಗಿ ನಡೆದರೆ, ಸ್ವಲ್ಪಮಟ್ಟಿಗಾದರೂ ಬದಲಾವಣೆ ಕಾಣಲು ಸಾಧ್ಯ ಎಂದರು.ಸಿದ್ದಿ ಸಮಾಧಿ ಯೋಗದ ಪ್ರಾಚಾರ್ಯರಾದ ಚಂದ್ರಶೇಖರ್ ಮೇಟಿ ಯವರು ಮಾತನಾಡುತ್ತಾ ಯೋಗ ಶಿಬಿರದಲ್ಲೂ ಸಹ ಮತಗಳನ್ನು ಹಾಕುವುದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ, ಪ್ರತಿಯೊಂದು ಯೋಗ ಕೇಂದ್ರದಲ್ಲೂ ಸಹ ಮತದಾನದ ಪ್ರಾಮುಖ್ಯತೆಯನ್ನು ತಿಳಿಸಿ ಕೊಡುವುದರಿಂದ, ಚುನಾವಣೆಗಳಲ್ಲಿ ಹೆಚ್ಚಿನ ಜನ ಭಾಗವಹಿಸಿ, ತಮ್ಮ ಮತವನ್ನು ಚಲಾಯಿಸಬಹುದು, ಯಾರು ಸಹ ತಮ್ಮ ಅಮೂಲ್ಯವಾದ ಮತವನ್ನು ನಷ್ಟ ಮಾಡಿಕೊಳ್ಳಬಾರದು ಎಂದರು