ನಿಮ್ಮ ಮತ”  “ನಿಮ್ಮ ಭವಿಷ್ಯ” ಮತದಾನ ಜಾಗೃತಿ ಅಭಿಯಾನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.15: ನಗರದ ತಾಲೂಕು ಕ್ರೀಡಾಂಗಣ ದಿಂದ ಪ್ರಮುಖ ಬದಿಗಳಲ್ಲಿ ಮತದಾನದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
 ಸಿರುಗುಪ್ಪ ಸ್ವೀಪ್ ಸಮಿತಿ ಅಡಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿರುಗುಪ್ಪ , ಅಂಗನವಾಡಿ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು.
 ತಾಲೂಕು ಚುನಾವಣಾಧಿಕಾರಿ ಸತೀಶ್, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಮಡಗಿನ ಬಸಪ್ಪ, ಸಿ.ಡಿ.ಪಿ.ಒ ಜಲಾಲಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಯವರು ಇದ್ದರು.