ನಿಮ್ಮ ಪ್ರೀತಿ ಅಭಿಮಾನಕ್ಕೆ ಋಣಿಯಾಗಿದ್ದೇನೆ:ಕುಲಕರ್ಣಿ

ತಾಳಿಕೋಟೆ:ಜು.30: ನಾನು ಗಂಗಾವತಿ ತಾಲೂಕಿನಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡಾ ನನ್ನ ಧರ್ಮ ಪತ್ನಿಯ ತವರು ಮನೆ ತಾಳಿಕೋಟೆಗೆ ಬೆಟ್ಟಿ ಕೊಟ್ಟಾಗ ನನಗೆ ತಾವು ತೋರಿಸುತ್ತಿರುವ ಪ್ರೀತಿ ಅಭಿಮಾನಕ್ಕೆ ನಾನು ಸದಾ ಋಣಿಯಾಗಿದ್ದೇನೆಂದು ಕಲ್ಬುರ್ಗಿ ಹೈಕೋರ್ಟ್ ಪೀಠದ ಸರ್ಕಾರದಿಂದ ಅಡ್ವೋಕೇಟ್ ಜನರಲ್ ರಾಗಿ ನೇಮಕಗೊಂಡ ನ್ಯಾಯವಾದಿ ಮಲ್ಹಾರರಾವ್ ಕುಲಕರ್ಣಿ ಅವರು ಹೇಳಿದರು.

ರಾಜ್ಯ ಸರ್ಕಾರದಿಂದ ಅಡ್ವಕೇಟ್ ಜನರಲ್‍ಗಿ ನೇಮಕಗೊಂಡ ಬಳಿಕೆ ಪ್ರಥಮ ಭಾರಿಗೆ ತಾಳಿಕೋಟೆ ಪಟ್ಟಣಕ್ಕೆ ಆಗಮಿಸಿದ ನ್ಯಾಯವಾದಿ ಮಲ್ಹಾರರಾವ್ ಕುಲಕರ್ಣಿ ಅವರಿಗೆ ಪಟ್ಟಣದ ವಿವಿಧ ಸಂಘಟನೆಯ ವತಿಯಿಂದ ಹಾಗೂ ವಿವಿಧ ಸಮಾಜ ಬಾಂದವರ ವತಿಯಿಂದ ನ್ಯಾಯವಾದಿಗಳ ಬಾರ್ ಅಸೋಶೇಷನ್ ಒಳಗೊಂಡು ಅಭಿಮಾನಿಬಳಗದ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ನಾನು ಕಲ್ಬುರ್ಗಿ ಹೈಕೋಟ್‍ಗೆ ಅಡ್ವೋಕೇಟ್ ಜನರಲ್‍ಆಗಿ ನೇಮಕಗೊಂಡಿರುವ ಖುಷಿ ನನಗಿಂತಲೂ ನಮ್ಮ ತಾಳಿಕೋಟೆ ಊರಿನ ಅಳಿಯ ಮೇಲ್ಮಟ್ಟದ ಹುದ್ದೆಗೆ ಹೋಗಿದ್ದಾನೆಂಬ ಈ ಭಾಗದ ಜನರಿಗೆ ಹೆಚ್ಚಿಗೆ ಖುಷಿಯಾಗಿರುವದು ನನಗೆ ಸಂತವನ್ನು ತಂದಿದೆ ನಿಮ್ಮೇಲ್ಲರ ಪ್ರೀತಿ ವಿಸ್ವಾಸ ನನಗೆ ಇನ್ನೂ ಬೆಳೆಯಲು ಪುಷ್ಠಿನೀಡಲಿದೆ ಅದರ ಜೊತೆಯಾಗಿ ತಾಳಿಕೋಟೆ ಪಟ್ಟಣದಲ್ಲಿ ನ್ಯಾಯಾಲಯ ಸ್ಥಾಪನೆಯಾಗಬೇಕೆಂಬ ಬಹುದಿನಗಳ ಬೇಡಿಕೆ ಹಾಗೆ ಉಳಿದುಕೊಂಡಿದೆ ಇದಕ್ಕೆ ಸಂಬಂದಿಸಿ ಈ ಭಾಗದ ಜನರಿಗೆ ಇರುವ ನ್ಯಾಯಾಲಯ ಸ್ಥಾಪನೆಯ ಅವಶ್ಯಕತೆಯನ್ನು ನ್ಯಾಯಾದೀಶರ ಗಮನಕ್ಕೆ ತಂದು ನ್ಯಾಯಾಲಯ ಪ್ರಾರಂಭಕ್ಕೆ ಪ್ರಯತ್ನಿಸುತ್ತೇನೆಂದರು.

ಇನ್ನೋರ್ವ ಯುವ ಮುಖಂಡ ಶಿವಶಂಕರ ಹಿರೇಮಠ ಅವರು ಮಾತನಾಡಿ ಗಂಗಾವತಿ ತಾಲೂಕಿನ ಲಾದನೂಸಗಿ ಗ್ರಾಮದಲ್ಲಿ ಜನಿಸಿದ ಅಡ್ವೋಕೇಟ್ ಜನರಲ್ ನ್ಯಾಯವಾದಿ ಮಲ್ಹಾರರಾವ್ ಕುಲಕರ್ಣಿ ಅವರು ಬಡ ರೈತ ಕುಟುಂಭದಲ್ಲಿ ಹುಟ್ಟಿ ಬೆಳೆದವರಾಗಿದ್ದಾರೆ ಬಡವರ ಕಷ್ಟವನ್ನು ಅರೀತಿವರಾಗಿದ್ದಾರೆ ಇವರು ತಾಳಿಕೋಟೆಯ ಅಳಿಯ ಆಗಿದ್ದರೂ ಕೂಡಾ ನನ್ನ ಊರು ಎಂಬ ಅಭಿಮಾನ ಇಟ್ಟುಕೊಂಡು ಪಟ್ಟಣದ ಏಳಿಗೋಸ್ಕರ್ ಅನೇಕ ಕೆಲಸಗಳನ್ನು ಮಾಡಿದ್ದಾರೆ ಮುಂದೆಯೂ ಕೂಡಾ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಅಭಿಲಾಷೆಯನ್ನು ಹೊಂದಿದ್ದು ಅವರಿಗೆ ತಾಳಿಕೋಟೆ ಪಟ್ಟಣದ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆಂದರು.

ಈ ಸಮಯದಲ್ಲಿ ಅಡ್ವೋಕೇಟ್ ಜನರಲ್ ನ್ಯಾಯವಾದಿ ಮಲ್ಹಾರರಾವ್ ಕುಲಕರ್ಣಿ ಅವರ ಧರ್ಮ ಪತ್ನಿ ಶ್ರೀಮತಿ ದೀಪಾ ಕುಲಕರ್ಣಿ, ಮಂಜುನಾಥ ಕುಲಕರ್ಣಿ(ಶಾರದಾಲೇಔಟ), ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ನ್ಯಾಯವಾದಿ ಆನಂದ ಮದರಕಲ್ಲ, ವಿಶ್ವನಾಥ ಬಿದರಕುಂದಿ, ಮಲ್ಹಾರಿ ಕುಲಕರ್ಣಿ, ಶಿವು ಹೂಗಾರ, ಮಲ್ಲನಗೌಡ ಪಾಟೀಲ, ಮುತ್ತಣ್ಣ ದೇಸಾಯಿ, ಡಾ.ನಜೀರ ಕೋಳ್ಯಾಳ, ಆರ್.ಎಲ್.ಕೊಪ್ಪದ, ವಾಸುದೇವ ಹೆಬಸೂರ, ಎಂ.ಎಸ್.ಸರಶೆಟ್ಟಿ, ಕಾಶಿನಾಥ ಮುರಾಳ, ಶಿವಶಂಕರ ಹಿರೇಮಠ, ಈರಣ್ಣ ಹಾವರಗಿ, ಶಂಕರಗೌಡ ಕಂತಲಗಾವಿ, ಬಸನಗೌಡ ಬಿರಾದಾರ(ಕುಪ್ಪಿ), ಎಚ್.ಎಸ್.ಪಾಟೀಲ, ಶಶಿಧರ ಡಿಸಲೆ, ದಿನಕರ ಜೋಶಿ, ಎಂ.ಬಿ.ಮಡಿವಾಳರ, ನ್ಯಾಯವಾದಿ ಪ್ರಭಾಕರ ಗುಡಗುಂಟಿ, ನಾರಿ, ಹಣಮಂತ್ರಾಯ ಡವಳಗಿ, ರಜಾಕ ಮನಗೂಳಿ, ರಾಜೇಸಾ ಒಂಟಿ, ತಮ್ಮಣ್ಣ ದೇಶಪಾಮಢೇ, ಪಿಎಸ್‍ಐ ರಾಮನಗೌಡ ಸಂಕನಾಳ, ಮೊದಲಾದವರು ಇದ್ದರು.