ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ: ಅಶೋಕ್

ಬಳ್ಳಾರಿ ಏ 24 : ಇಲ್ಲಿನ 19 ವಾರ್ಡಿನ ಬಿಜೆಪಿ ಅಭ್ಯರ್ಥಿ ಕೆ.ಎಸ್.ಅಶೋಕ್ ಕುಮಾರ್ ಅವರು ತಮ್ಮ ಪಕ್ಷದ ಜಿಲ್ಲಾ ಮಾಧ್ಯಮ ವಕ್ತಾರರಾದ ಖ್ಯಾತ ವೈದ್ಯ ಡಾ.ಬಿ.ಕೆ.ಸುಂದರ್ ಅವರೊಂದಿಗೆ ವಾರ್ಡಿನ ಸತ್ಯನಾರಾಯಣ ಪೇಟೆಯಲ್ಲಿ ಮನೆ ಮನೆಗೆ ಸಂಚರಿಸಿ ಮತಯಾಚನೆ ಮಾಡುತ್ತ. ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ಹೇಳುತ್ತ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದರು.
ನಮ್ಮ 19 ವಾರ್ಡು ನಗರದಲ್ಲಿ ಒಂದು ಮಾದರಿ ವಾರ್ಡನ್ನಾಗಿ ಮಾಡಬೇಕೆಂಬ ಹಂಬಲ ನನ್ನದಾಗಿದ್ದು. ಬಿಜೆಪಿಗೆ ಮತ ಹಾಕುವ ಮೂಲಕ ನನ್ನ ಆಸೆಗೆ ನೀರೆಯಬೇಕು ಎಂದರು. ಈ ಸಂದರ್ಭದಲ್ಲಿ ಡಾ.ಎಸ್,ಕೆ ಅರುಣ್, ಬಿಜೆಪಿ ರಾಜ್ಯ ಮಹಿಳಾ ಮೋಚಾದ ಕಾರ್ಯದರ್ಶಿ ನಿಶ್ಚಿತ ಮೊದಲಾದವರು ಇದ್ದರು.