“ನಿಮ್ಮೊಂದಿಗೆ ನಾವು” ಮುಗಳಖೋಡ-ಜಿಡಗಾ ಶ್ರೀಗಳ ಅಭಯ

ಕಲಬುರಗಿ,ಜೂ.5-ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾ ಮಾರಣಾಂತೀಕ ವೈರಾಣು ಕೊರೊನಾ ಜನರ ಮಾನಸೀಕ ನೆಮ್ಮದಿಯನ್ನು ದೂರ‌ ಮಾಡಿ ಸ್ವಂತ ಸಂಬಂಧಿಕರೆ ಹತ್ತಿರ ಸುಳಿಯದೆ ಅದೆಷ್ಟೋ ಜೀವಿಗಳು ಆಸ್ಪತ್ರೆಗಳಲ್ಲಿ ಇನ್ನೇನು ನಮ್ಮ ಬದುಕೆ‌ ಮುಗಿದು ಹೋಯಿತು ಎಂಬುವ‌ ಸ್ಥಿತಿಗೆ‌ ಬಂದಾಗ ಈ ಸಮಯದಲ್ಲಿ ಸಾವಿರಾರು ಕೊರೊನಾ ಸೊಂಕೀತರಿಗೆ “ನಿಮ್ಮೊಂದಿಗೆ ನಾವು” ಇದ್ದೇವೆ ಶ್ರೀಮಠದ ಶ್ರೀರಕ್ಷೆ ಇದೆ “ಭರವಸೆಯೆ‌ ಬದುಕು ಭಯವೆ ಮರಣ” ಎಂಬುವ ಸಾಂತ್ವನದ‌ ಸಂದೇಶವನ್ನು ‌ಹೊತ್ತೊಕೊಂಡು ಕಲುಬುರಗಿ ಜಿಲ್ಲೆಯ‌ ಸುತ್ತ ಮುತ್ತಲಿರುವ ಸಾವಿರಾರು ಸೊಂಕೀತರ‌ ಬದುಕಿನಲ್ಲಿ ಹೊಸ‌ ಭರವಸೆಯನ್ನು ಮೂಡಿಸಿದವರೇ ಡಾ.ಮುರುಘರಾಜೆಂದ್ರ ಮಹಾಸ್ವಾಮಿಗಳವರು.
ಒಂದು ಕಡೆ ಸ್ವಂತ ಸಂಬಂಧಿಕರೆ ಸೋಂಕಿತರನ್ನು ನೋಡಲು ಹಿಂಜರೀಯುವ ಸಮಯದಲ್ಲಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ತಾವೇ ಆಹಾರ‌ ತಯಾರಿಸಿ ಸಾವಿರಾರು ಸೋಂಕಿತರಿಗೆ ಅಧಿಕಾರಿಗಳಿಗೆ, ದಾದಿಯರಿಗೆ, ಪೋಲಿಸರಿಗೆ, ಬಡ ಕುಟುಂಬ ಬಡಾವಣೆಗಳಿಗೆ, ಆಶಾ ಕಾರ್ಯಕರ್ತರೆಗೆ‌ ದಿನಂ‌ಪ್ರತಿ ಮಹಾಪ್ರಸಾದ‌ ವಿತರಿಸಿ ಸರಳತೆ‌ಗೆ‌ ಸಾಕ್ಷಿ ಆಗಿದ್ದಾರೆ.
ಜೋತೆಗೆ ಶ್ರೀಮಠದ ವತಿಯಿಂದ ಸೋಂಕಿತ ಕುಟುಂಬಗಳಿಗೆ‌ ಅಕ್ಕಿ-ಬೇಳೆ‌-ಸಕ್ಕರೆ ವಿತರಿಸಲು ಎಲ್ಲ ತಯಾರಿ ಕೂಡ ಮಾಡಿ ಇಟ್ಟಿದ್ದಾರೆ. ಈ ಸಮಯದಲ್ಲಿ ಶ್ರೀಗಳು ಒಂದು ಸಂದೇಶವನ್ನು ಸಹಃ ನೀಡಿದ್ದು, ಕಷ್ಟಕ್ಕೆ‌ ಆಗದ‌ ಮಾನವನ‌ ಬದುಕು ವ್ಯರ್ಥ ಎಂದರಿತು, ಇಂದಿನ ಸಮಾಜದ‌ ನೋವು ತಮಗಾದ ನೋವು ಎಂಬುವಂತೆ‌ ಭಾವಿಸಬೇಕು ಎಂದಿದ್ದಾರೆ.