
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01: ನಿಮ್ಮ ಆಶೀರ್ವಾದ ನಮ್ಮ ಬಿಜೆಪಿಗೆ ಇರಲಿ ಎಂದು 37ನೇ ವಾರ್ಡಿನ ದೇವಿನಗರದ ಹಿರಿಯಜ್ಜಿ ಕಾಲಿಗೆ ನಮಸ್ಕರಿಸಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತಯಾಚನೆ ಮಾಡಿದರು
ಅವರು ಇಂದು ನಗರದ 37 ವಾರ್ಡಿನ ಎಲ್ಲಮ್ಮಗುಡಿ, ಮರಾಠ ಸ್ರ್ಟೀಟ್, ದೇವಿನಗರದ ಒಂದು, ಎರೆಡು ಮತ್ತು ಮೂರನೇ ಕ್ರಾಸ್ ಗಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಸಹಜವಾಗಿ ಶಾಸಕರು ಹಿರಿಯರು ಕಂಡಾಕ್ಷಣ ಕಾಲಿಗೆರುಗುತ್ತಾರೆ. ಇದು ಅವರು ಮೊದಲಿನಿಂದ ರೂಡಿಸಿಕೊಂಡು ಬಂದಿರುವ ಗುಣ. ತಾಯಿ ಸ್ವರೂಪದಂತಿರುವ ವೃದ್ದಗೆ ನಮಸ್ಕಾರ ಮಾಡಿದಾಗ ಆ ವೃದ್ದೆ ನಿಮ್ಮಂತವರು ನಮಗೆ ನಮಸ್ಕಾರ ಯಾಕಪ್ಪ ಎಂದರೆ. ನಿಮ್ಮಂತಹ ದೊಡ್ಡವರ ಆಶಿರ್ವಾದದಿಂದಲೇ ನಾನು ಬೆಳೆದಿರುವೆ. ಚುನಾವಣೆಗೆ ನಿಂತಿರುವೆ ಎಂದಾಕ್ಷಣ ಓ ಗೊತ್ತು ಬಿಡಪ್ಪ ಹೂವಿಗೆ ಓಟಾಕ್ತೀನಿ ಎಂದು ಆ ವೃದ್ದೆ ಆಶಿರ್ವದಿಸಿರು.
ಶಾಸಕರೊಂದಿಗೆ ಮುಖಂಡರಾದ ಸುಮ,ಸ್ನೇಹಲತ,ಲಕ್ಷ್ಮೀ, ಅನೂಫ್ ಕುಮಾರ್, ಸಂಪತ್, ಶ್ರೀನಿವಾಸ್, ಸುಧಾಕರ್, ನವೀನ್, ರಾಮಮೂರ್ತಿ ಮತ್ತಿತರರು ಇದ್ದರು.