
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.08; ನಿಮಗೆ ಪಟ್ಟ ಬರಬೇಕು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು. ಈ ಮೂರು ಗ್ಯಾರಂಟಿಗಳು ನಿಮಗೆ ಸಿಗಬೇಕೆಂದರೆ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು. ಪ್ರತಿಯೊಂದು ಹಬ್ಬಕ್ಕೂ ಕಲರ್ಫುಲ್ ಲೈಟ್ ಗಳನ್ನು ಹಾಕಿ ಸಂಭ್ರಮದಿಂದ ಆಚರಣೆ ಮಾಡಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮತದಾರರಿಗೆ ಹೇಳಿದ್ದಾರೆ.
ಇಲ್ಲಿನ ಕೌಲ್ ಬಜಾರ್ ವ್ಯಾಪ್ತಿಯ 25 ಮತ್ತು 28ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿಗಳ ಕಾರ್ಡ್ ವಿತರಣೆ ಕಾರ್ಯಕ್ರಮವದಲ್ಲಿ ಅವರು ಮಾತನಾಡುತ್ತಿದ್ದರು.
ಕೌಲ್ ಬಜಾರ್ ಭಾಗದ ಜನರಿಗೆ ಮನೆಯ ಪಟ್ಟ ಕೊಡಬಾರದು ಎಂದು ಬಿಜೆಪಿ ನಿರ್ಧರಿಸಿದೆ. ಯಾಕೆಂದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದಾರೆಮನದು ಅದಕ್ಕಾಗಿ ಇನ್ನೊಂದು ಸಾರಿ ಬಿಜೆಪಿ ಅವರ ಮುಖಕ್ಕೆ ಹೊಡೆದ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ ಅಧಿಕಾರಕ್ಕೆ ತಂದು ಪಟ್ಟಾ ಪಡೆದುಕೊಳ್ಳ ಎಂದರು
ಬಿಜೆಪಿ ಕೋಮುವಾದಿ ಪಕ್ಷಕ್ಕೆ ನೀವು ಯಾವತ್ತಿಗೂ ಮತವನ್ನು ಕೊಡಬೇಡಿ. ಕೋಮುವಾದಿ ಪಕ್ಷಗಳು, ಕೋಮುವಾದಿ ರಾಜಕಾರಣಿಗಳು ಸಮುದಾಯದ ಜನರಿಗೆ ಆಮಿಷಗಳನ್ನು ಒಡ್ಡುತ್ತಾರೆ, ಕೇಸ್ ಹಾಕುವುದಾಗಿ ಬೆದರಿಸುತ್ತಾರೆ ಯಾರೂ ಕೂಡ ಆಮಿಷಕ್ಕೆ ಈಡಾಗಬಾರದು, ಭಯಪಡಿಸಿದರೆ ಹೆದರಬಾರದು ನಾವೆಲ್ಲ ನಿಮ್ಮ ಜೊತೆ ಇದ್ದೇವೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಕೌಲ್ ಬಜಾರ್ ಪ್ರದೇಶವನ್ನು, ಇಡೀ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದರು
ನಮ್ಮ ಪಕ್ಷ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ ಎರಡು ಸಾವಿರ ರೂ, ಪ್ರತಿ ಕುಟುಂಬಕ್ಕೆ ಮಾಸಿಕ ಎರಡು ನೂರು ಯುನೀಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಅಲ್ಲದೆ ಮಾಸಿಕ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಲಿದೆಂದು ಗ್ಯಾರಂಟಿ ಕೊಡುವುದಾಗಿ ಹೇಳಿದರು.
ರಾಜ್ಯ ಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್, ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಪ್ರಚಾರ ಸಮಿತಿಯ ಬಳ್ಳಾರಿ ನಗರ ಜಿಲ್ಲಾಧ್ಯಕ್ಷ ಕೆ.ಎಸ್.ಎಲ್ ಸ್ವಾಮಿ ಮೊದಲಾದವರು ಇದ್ದರು.