ನಿಮಗೂ ಭವಿಷ್ಯದಲ್ಲಿ ಉತ್ತಮ ಅವಕಾಶಅಂಜನೇಯಲುಗೆ ರಾಹುಲ್ ಭರವಸೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ನಿಮಗೂ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು. ಕೆಪಿಸಿಸಿ ಕಾರ್ಯದರ್ಶಿ  ಜೆ.ಎಸ್.ಆಂಜನೇಯಲು ಅವರಿಗೆ ಭರವಸೆ ನೀಡಿದ್ದಾರಂತೆ.
ನಿನ್ಮೆ ಸಂಜೆ ನಗರದಲ್ಲಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಅಭ್ಯರ್ಥಿಗಳ ಪರ ರೋಡ್ ಶೋ ಮತ್ತು ಬಹಿರಂಗ ಸಭೆಯಲ್ಲಿ ಮಾತನಾಡಲು ಬಂದಿದ್ದ ರಾಹುಲ್ ಅವರಿಗೆ ರಾಜ್ಯದ ಉಸ್ತುವಾರಿ  ಸುರ್ಜಿವಾಲ ಅವರು ಅಸಂಜನೇಯಲು ಅವರನ್ನು ಪರಿಚಯ ಮಾಡಿಸಿ ಬಳ್ಳಾರಿಯಲ್ಲಿ ಏನೇ ಬಂದರು ಇತರ ಪಕ್ಷಷಗಳನ್ನು ಎದುರಿಸುವ ಗಟ್ಟಿ ಕುದುರೆ ಇವರು. ಟಿಕೆಟ್ ಗೆ ಪ್ರಯತ್ನಿಸಿದ್ದರು. ಆಗಲಿಲ್ಲ ಎಂದಾಗ. ಆಯ್ತು ಭವಿಷ್ಯದಲ್ಲಿ ಇದಕ್ಕಿಂತಲೂ ಉತ್ತಮ ಅವಕಾಶವನ್ನು ಪಕ್ಷ ನೀಡಲಿದೆಂಬ ಭರವಸೆ ನೀಡಿದರೆಂದು ಆಂಜನೇಯಲು ಹೇಳಿದ್ದಾರೆ.
ಪಕ್ಷದ ನಾಯಕನ ಈ ಮಾತು ಈ  ಚುನಾವಣೆಯಲ್ಲಿ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಮತ್ತಷ್ಟು ಹೋರಾಟ ಮಾಡಲು ಸ್ಪೂರ್ತಿ ನೀಡಿದೆಂದು ಹೇಳಿದ್ದಾರೆ.