ನಿಮಗಾಗಿ ನಾವು ಸಂಸ್ಥೆಯಿಂದನಮ್ಮ ಪರಿಸರ ಯೋಜನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.12: ನಗರದ  ‘ನಿಮಗಾಗಿ ನಾವು ಸಂಸ್ಥೆ  “ನಮ್ಮ ಪರಿಸರ” ಯೋಜನೆ  ಮೂಲಕ ಕಳೆದ ಎಂಟು ವರ್ಷಗಳಿಂದ  ನಗರದಲ್ಲಿ ಸಸಿ ನೆಡುವ ಕಾರ್ಯ ಮಾಡುತ್ತಾ ಬಂದಿದ್ದು. ನಿನ್ನೆ ಸಹ  30 ಕ್ಕೂ ಹೆಚ್ಚು ಸಸಿಗಳನ್ನು ಇಲ್ಲಿನ ಗಾಂಧಿನಗರ ಮತ್ತು ಸದಾಶಿವ ನಗರಗಳಲ್ಲಿ ನೆಟ್ಟರು.
ಇವರು ಸಸಿ ನೆಡುವುದಷ್ಟೇ ಅಲ್ಲದೆ ಅವನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಸುವ ಕಾರ್ಯವನ್ನೂ ಮಾಡುತ್ತಾರೆ.
ಸಂಸ್ಥೆಯ ಅಧ್ಯಕ್ಷ ವಿನಯ್ ಈ ಸಂದರ್ಭದಲ್ಲಿ  ಮಾತಾಡಿ ಈ ಮಳೆಗಾಲ ಮುಗಿಯುವವರೆಗೆ ಮರಗಳನ್ನು ಬೆಳೆಸುವವರಿಗೆ ಸಸಿಗಳನ್ನು ನೀಡಲಿದ್ದೇವೆ ಮತ್ತು ಪ್ರತಿ ಭಾನುವಾರ ಸಸಿಗಳನ್ನು ನೆಡಲಿದ್ದೇವೆ ಆಸಕ್ತಿ ಉಳ್ಳವರು ಸಂಪರ್ಕಿಸಬಹುದೆಂದು ಹೇಳಿದರು.
ಕಾರ್ಯದರ್ಶಿ ಮಂಜುನಾಥ ರೆಡ್ಡಿ, ಬಿಸಿಲಿಗೆ ಹೆಸರಾದ ಬಳ್ಳಾರಿಯನ್ನು ನಮ್ಮ ಕೈಲಾದ ಮಟ್ಟಿಗೆ ಹಸಿರಾಗಿಸೋಣ ಎಲ್ಲರೂ ತಪ್ಪದೇ ಸಸಿ ನೆಡೋಣವೆಂದರು.
ನಿವೃತ್ತ ಪಿಎಸ್ಐ  ಎನ್ ಮೋಹನ್ ರೆಡ್ಡಿ,  ನಿಮಗಾಗಿ ನಾವು ಸಂಸ್ಥೆಯ ಈ  ನಮ್ಮ ಪರಿಸರ  ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮಗೆ ತುಂಬಾ ಖುಷಿಯ ಮತ್ತು ಹೆಮ್ಮೆಯ ವಿಚಾರ ಇದು ಎಲ್ಲರಿಗೂ ಮಾದರಿ ಎಂದರು.  ಕರ್ನಾಟಕ ಬ್ಯಾಂಕ್ ನೌಕರ  ವೆಂಕಟ ಗುರು ಕೆ ಎನ್ ಅವರು, ಬಿಡುವಿನ ವೇಳೆಯಲ್ಲಿ ಸುಖಸುಮ್ಮನೆ ಕಾಲ ಕಳೆಯುವ ಯುವ ಜನಾಂಗದ ನಡುವೆ ಸಸಿ ನೆಡುವ ಕೆಲಸ ಮಾಡುತ್ತಿರುವ  ಸಂಸ್ಥೆಯ ಈ ಯುವ ಪಡೆಯ ಕಾರ್ಯವು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕೆ.ಆಶಾ,  ಸಾವಿತ್ರಿ, ಜೋಶ್ನಾ ಕಾಕಿ, ಸಿರಿ,ಮಾನಸ, ಪೃಥ್ವೀ, ಹರೀಶ್ ರೆಡ್ಡಿ, ದಕ್ಷಿಣ ಮೂರ್ತಿ, ಮಂಜುನಾಥ, ಹೊನ್ನುರ ಸ್ವಾಮಿ, ಗುರು, ಶೇಖರ್, ಮಹಮ್ಮದ್ ಭಾಷ, ಕೃಷ್ಣ, ಪಂಪಾಪತಿ, ಜಯಪ್ರಕಾಶ್, ರಾಯಚೋಟಿ ಸ್ವಾಮಿ, ರಾಹುಲ್, ಕೆಂಚಪ್ಪ ಮೊದಲಾದವರು  ಪಾಲ್ಗೊಂಡಿದ್ದರು.