ನಿಮಗಾಗಿ ನಾವು,ಪೆÇಲೀಸ್ ಅಂದ್ರೇ ಭಯ ಬೇಡ : ಇಶಾ ಪಂತ್

ಜೇವರ್ಗಿ:ಅ.26: ಸಂಕಷ್ಟಕ್ಕೆ, ದುಃಖ ದುಮ್ಮಾನಗಳನ್ನು ಆಲಿಸಲಿಕ್ಕೆ ಹಾಗೂ ತಮಗೆ ಸಹಾಯ ಮಾಡಲು ಕಲಬುರಗಿ ಪೆÇಲೀಸ್ ದಿನದ 24 ಗಂಟೆಗಳ ಕಾಲ ಸೇವೆ ನೀಡಲು ಸಿದ್ದ.ನಿಮಗಾಗಿ ನಾವುಗಳು ಆದ್ದರಿಂದ ಪೆÇಲೀಸರು ಅಂದರೆ ಭಯ ಬೇಡ ಎಂದು ಲೇಡಿ ಸಿಂಗಂ ಎಂದೆ ಖ್ಯಾತಿ ಪಡೆದಿರುವ ಖಡಕ್ ಪೆÇಲೀಸ್ ವರೀಷ್ಠಾಧಿಕಾರಿ ಇಶಾ ಪಂತ್ ಹೇಳಿದರು.

ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಅನ್ನದ ಮಠ ಬಿರುದಾಂಕಿತ ವಿರಕ್ತ ಮಠದ ಸಭಾಂಗಣದಲ್ಲಿ ಗುರುವಾರ ಕಲಬುರಗಿ ಜಿಲ್ಲಾ ಪೆÇಲೀಸ್ ಹಾಗೂ ನೆಲೋಗಿ ಪೆÇಲೀಸ್ ಠಾಣೆ ಸಹಯೋಗದಲ್ಲಿ ನಿಮ್ಮ ಮನೆ ಬಾಗಿಲಿಗೆ ಪೆÇಲೀಸರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಪೆÇಲೀಸ್ ವರೀಷ್ಠಾಧಿಕಾರಿ ಇಶಾ ಪಂತ್, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹ ಪೆÇಲೀಸರ ಜೊತೆ ಕೈ ಗೂಡಿಸಬೇಕು.ಸಮಾಜದಲ್ಲಿ ಅಹಿತಕರ ಘಟನೆ ಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೆÇಲೀಸರ ಕಾರ್ಯ ಅಷ್ಟೇ ಅಲ್ಲ.ಪ್ರತಿಯೊಬ್ಬರ ಕಾರ್ಯ ಸಹ ಹೌದು ಎಂದು ಹೇಳಿದರು.

ಗ್ರಾಮಸ್ಥರು ನಮ್ಮ ಊರಲ್ಲಿ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡುತ್ತಿದ್ದಾರೆ. ನಮ್ಮ ಶಾಲಾ ಆವರಣದಲ್ಲಿ ಕಿಡಗೇಡಿಗಳು ಮಧ್ಯ ಸೇವಿಸಿ ಶಾಲಾ ಆವರಣ ಕಲುಷಿತ ಮಾಡುತ್ತಿದ್ದಾರೆ ಎಂದು ಹೇಳಿದರು. ತಕ್ಷಣವೇ ಬೀಟ್ ಪೆÇಲೀಸರಿಗೆ ಕರೆದು ಅಂತಹ ಘಟನೆ ಯಾಗದಂತೆ ಕ್ರಮ ಕೈಗೊಳ್ಳಲು ಸ್ಥಳದಲ್ಲೇ ಸೂಚಿಸಿದರು.ಶೌಚಾಲಯ ಸಮಸ್ಯೆ ಬಗ್ಗೆ ಸಹ ಇಶಾ ಪಂತ್ ರವರು ಸ್ಪಂಧಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೊನ್ನದ ಶ್ರೀಗಳಾದ ಡಾ.ಶಿವಾನಂದ ಶ್ರೀಗಳು ವಹಿಸಿದ್ದರು. ಜೇವರ್ಗಿ ಸಿಪಿಐ ಶಿವ ಪ್ರಸಾದ ಹಿರೇಮಠ, ನೆಲೋಗಿ ಪಿಎ??? ಗೌತಮ ಗುತ್ತೆದಾರ, ಅಪರ ಪಿಎ??? ವಿಶ್ವನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷ ಶಿವು ಗುಬ್ಯಾಡ,ಎಸ್ ಎಸ್ ಸಲಗರ,ಮಲ್ಲಿಕಾರ್ಜುನ ಎಸ್ ಬಿರಾದಾರ, ಮಹೇಶಕುಮಾರ ಮಹಾಜನ ಶೆಟ್ಟಿ,ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಂದ್ರಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.


ಕಲಬುರಗಿ ಜಿಲ್ಲಾ ಪೆÇಲೀಸ್ ವರೀಷ್ಠಾಧಿಕಾರಿ ಇಶಾ ಪಂತ್ ರವರಿಗೆ,ಮುದ್ದು ವಿದ್ಯಾರ್ಥಿಗಳು ಸಾಲಾಗಿ ನಿಂತು ಇಶಾ ಪಂತ್ ರವರ ಮೇಲೆ ಹೂ ಗಳ ಪುಷ್ಪಾರ್ಚನೆ ಮಾಡಿದರು. ಹಾಗೂ ಕಾರ್ಯಕ್ರಮ ವೇದಿಕೆಯ ವರೆಗೂ ಹೂ ಗುಚ್ಛ ನೀಡಿ ಅದ್ದೂರಿ ಸ್ವಾಗತ ಕೋರಿದರು.


ನಿಮ್ಮ ಮನೆ ಬಾಗಿಲಿಗೆ ಪೆÇಲೀಸರು ಎಂಬ ವಿನೂತನ ಉತ್ತಮ ಸಮಾಜಕ್ಕಾಗಿ. ಇಂತಹ ಕಾರ್ಯಕ್ರಮ ಇಡಿ ಕರುನಾಡಿನಲ್ಲಿಯೇ ಪ್ರಥಮ. ಇಂತಹ ಕಾರ್ಯಕ್ರಮದ ರೂವಾರಿ ನಮ್ಮ ಕಲಬುರಗಿ ಪೆÇಲೀಸ್ ವರೀಷ್ಠಾಧಿಕಾರಿ ಇಶಾ ಪಂತ್ ರವರು ಎಂದರೆ ನಮಗೆ ಹೆಮ್ಮೆ ಎಂದು ಸೊನ್ನದ ಶ್ರೀಗಳಾದ ಡಾ.ಶಿವಾನಂದ ಶ್ರೀಗಳು ಹೇಳಿದರು.