ನಿಫಾ ಸೋಂಕಿತರಲ್ಲಿ ಮರಣ ಹೆಚ್ಚಳ

ನವದೆಹಲಿ, ಸೆ.೧೬-ಕೋವಿಡ್ -೧೯ ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಅಧಿಕ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್ ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಆದರೆ,
ಕೋವಿಡ್ ಸಾವಿನ ಪ್ರಮಾಣವನ್ನು ಎರಡರಿಂದ ಮೂರು ಪ್ರತಿಶತ ಹೊಂದಿದ್ದರೆ, ನಿಫಾ ಸಾವಿನ ಪ್ರಮಾಣ ೪೦ ರಿಂದ ೭೦ ಪ್ರತಿಶತದವರೆಗೆ ಇದೆ ಎಂದು ಹೇಳಿದರು.
ಕೇಸ್‌ಗಳು ಇಷ್ಟು ವೇಗವಾಗಿ ಏಕೆ ಹರಡುತ್ತಿದೆ ಎನ್ನುವುದು ನಮಗೆ ತಿಳಿದಿಲ್ಲ.
೨೦೧೮ರಲ್ಲಿ ಬಾವಲಿಗಳಿಂದ ಏಕಾಏಕಿಯಾಗಗಿ ಕೇರಳದಲ್ಲಿ ಈ ವೈರಸ್ ಹಬ್ಬಿತು ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಬಾವಲಿಗಳಿಂದ ಮನುಷ್ಯರಿಗೆ ಸೋಂಕು ಹೇಗೆ ಹರಡಿತು ಎಂಬುದು ನಮಗೆ ಖಚಿತವಿಲ್ಲ. ಇದರ ಲಿಂಕ್‌ಅನ್ನು ನಾವು ಇನ್ನೂ ಪಡೆದುಕೊಂಡಿಲ್ಲ. ಈ ಬಾರಿ ಮತ್ತೊಮ್ಮೆ ಅದರ ಲಿಂಕ್ ಹುಡುಕಲು ಪ್ರಯತ್ನಿಸಲಿದ್ದೇವೆ ಎಂದರು.
ಮತ್ತೊಂದೆಡೆ, ಐಸಿಎಂಆರ್ ಡಿಜಿ ಪ್ರಕಾರ, ಭಾರತವು ನಿಫಾ ವೈರಸ್ ಸೋಂಕಿನ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದಿಂದ ಇನ್ನೂ ೨೦ ಡೋಸ್ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ಸಂಗ್ರಹಿಸಲಿದೆ.
ನಾವು ೨೦೧೮ ರಲ್ಲಿ ಆಸ್ಟ್ರೇಲಿಯಾದಿಂದ ಕೆಲವು ಡೋಸ್ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ಪಡೆದುಕೊಂಡಿದ್ದೇವೆ. ಪ್ರಸ್ತುತ, ಡೋಸ್‌ಗಳು ಕೇವಲ ೧೦ ರೋಗಿಗಳಿಗೆ ಮಾತ್ರ ಲಭ್ಯವಿದೆ” ಎಂದರು.