
ಕಲಬುರಗಿ:ಮೇ.6:ನಮಗೆ ಯಾರು ಕೆಟ್ಟದ್ದನ್ನು ಮಾಡುತ್ತಾರೋ ಅದು ಅವರ ಕರ್ಮ, ನಾವು ಯಾರಿಗೂ ಕೆಟ್ಟದ್ದನ್ನು ಬಯಸದೇ ಇರುವುದು ಅದು ನಮ್ಮ ಧರ್ಮ, ಅಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ, ಅದೇ ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮಾನ ಎಂದು ತಾಜ ಸುಲ್ತಾನಪುರ ಚಿನ್ನದಕಂತಿ ಚಿಕ್ಕವರೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು ಹೇಳಿದರು. ತಾಜ ಸುಲ್ತಾನಪುರ ಗ್ರಾಮದ ಶ್ರೀಮಠದಲ್ಲಿ ಗ್ರಾಮದ ವತಿಯಿಂದ ಪೂಜ್ಯರ 59ನೇ ಹುಟ್ಟುಹಬ್ಬದ ನಿಮಿತ್ಯ ಗುರುವಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಮನುಷ್ಯನ ಹುಟ್ಟು ಸಹಜ, ಸಾವು ಅನಿವಾರ್ಯ ಹುಟ್ಟು ಸಾವಿನ ಮಧ್ಯ ಉತ್ತಮವಾದ ಕಾರ್ಯ ಮಾಡಿ ಸದೃಢ ಸಮಾಜ ನಿರ್ಮಿಸಬೇಕು. ನಿನ್ನ ಉನ್ನತಿ ಆಗದಿದ್ದರೂ ಪರವಾಗಿಲ್ಲ, ಇನ್ನೊಬ್ಬರ ಅವನತಿಯನ್ನು ಮಾತ್ರ ಯಾವತ್ತೂ ಬಯಸಬೇಡಿ ಎಂದು ಮಾರ್ಮಿಕವಾಗಿ ನುಡಿದರು. ವೇದಿಕೆ ಮೇಲೆ ಸಾಹಿತಿಗಳಾದ ಶಿವಕವಿ ಜೋಗುರ, ಜನಪದ ಕಲಾವಿದ ರಾಜು ಹೆಬ್ಬಾಳ, ಕಲಬುರ್ಗಿ ತಾಲೂಕ ಉಪ ತಹಸಿಲ್ದಾರ ವೀರಯ್ಯ ಹೊಸಮಠ ಲಿಂಗರಾಜ ಮಾಲಿಪಾಟೀಲ ಇದ್ದರು. ಕಾರ್ಯಕ್ರಮದಲ್ಲಿ ಸಂಗಯ್ಯ ಹಿರೇಮಠ, ಶರಣಗೌಡ ಪಾಟೀಲ, ಸಂತೋಷ ಆಡೆ, ರವಿಕುಮಾರ ಶಹಾಪುರಕರ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಗುರುಶಾಂತ ಹಾಂವಾ, ಶಿವಶಂಕರ ಬಿರಾದಾರ ಕೋಟನೂರ, ರಾಜು ಉದನೂರ, ಶರಣಗೌಡ ಪಾಟೀಲ ಪಾಳಾ, ರಾಜು ಕುರಕೋಟಿ, ಶಿವಶರಣಪ್ಪ ಹಿರೇಮನಿ, ಶಿವಲಿಂಗಪ್ಪ ಮಾಳಾ, ಚಂದ್ರಶೇಖರ ಜಿ ಪಾಟೀಲ, ಆನಂದಕುಮಾರ ಖೇಳಗಿ, ರೇವಣಸಿದ್ದಯ್ಯ ಹೊಸಮಠ, ಶರಣಬಸಪ್ಪ ಮಚೆಟ್ಟಿ, ಮಹಾದೇವ ನಾಗೂರ, ರೇವಣಸಿದ್ದಯ್ಯ ಬೇಲೂರ, ಮಹೇಶ ಬೀರನಳ್ಳಿ, ಗುರುಶಾಂತಪ್ಪ ಕಲಕೋರಿ, ವೀರಯ್ಯ ಬಾಳಿ, ಬಸವರಾಜ ಶೀಲವಂತ, ನಾಗೇಂದ್ರ ದೇಗಲಮಡ್ಡಿ, ರಾಚಣ್ಣ ಸಂಗೊಳಗಿ, ಮಹಾಂತೇಶ ಭಾಗೋಡಿ,ರಾಜು ಪಾಟೀಲ, ಶರಣು ಮಾಮನಿ, ಮಲ್ಲಿಕಾರ್ಜುನ ಮುದ್ದಾಳ, ನಾಗಣ್ಣ ಚೌಡಾಪುರ, ಆರ್ ಡಿ ಮಡಿವಾಳ, ಚಿನ್ನು ಮಾಮನಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.