ನಿನ್ನೆ ರಾತ್ರಿಯೂ ಸುರಿದ ಮಳೆ ಬಳ್ಳಾರಿ ತಂಪು ಉರುಳಿದ ಗಿಡಮರಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.01: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಮಳೆ, ಬೀಸಿದ ಗಾಳಿಗೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಹಲವು ರಸ್ತೆಗಳಲ್ಲಿ ಗಿಡಮರಗಳು ಉರುಳಿ ಬಿದ್ದಿವೆ.
ರಾತ್ರಿ 8.30 ರ ಸುಮಾರಿಗೆ  ಆರಂಭವಾದ ಗುಡುಗು, ಸಿಡಿಲು ಸಹಿತ  ಆರಂಭವಾದ  ಬಿರುಸಿನ ಮಳೆ ಅರ್ಧಗಂಟೆಗೂ ಹರಚ್ಚು ಕಾಲ ಸುರಿಯಿತು. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿ  ವೇಳೆ ಕರೆಂಟ್ ಇಲ್ಲದೆ ಪರದಾಡುವಂತಾಯ್ತು.
ಇತ್ತ ಶ್ರೀಧರಗಡ್ಡೆಯಲ್ಲಿನ  ವಿದ್ಯುತ್ ವಿತರಣ ಕೇಂದ್ರ  ದುರಸ್ಥಿಗೆ ಬಂದಿರುವುದರಿಂದ ಇಲ್ಲಿಂದ ವಿದ್ಯುತ್ ಸರಬರಾಜಾಗುವ ಪ್ರದೇಶದಲ್ಲಿ ಕರೆಂಟ್ ಇಲ್ಲದಂತಾಗಿದೆ.
ಕಳೆದ ಎರೆಡು ದಿನಗಳಿಂದ ಸುರಿದ ಮಳೆಯಿಂದಾಗಿ ಕಾದ ಕಬ್ಬಿಣದಂತಿದ್ದ ಬಳ್ಳಾರಿಯ ನೆಲ ಒಂದುಷ್ಟು ತಂಪಾಗಿದೆನ್ನಬಹುದು.