ನಿನ್ನೆ ಬಣಗುಡುತ್ತಿದ್ದ ಕೊಟ್ಟೂರಿನ ಸರ್ಕಾರಿ ಕಚೇರಿಗಳು


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.02: ಸರ್ಕಾರಿ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ನಿನ್ನೆ ಬೀಕೋ ಅನ್ನುತ್ತಿದ್ದವು. ಪಪಂ ಕಚೇರಿ ಸೇರಿದಂತೆ ಹಲವಾರು ಕಚೇರಿಗಳಿಗೆ ಬೀಗ ಹಾಕಲಾಗಿತ್ತು.
 ನಡೆಯಬೇಕಿದ್ದ ಪ್ರಥಮ ವರ್ಷದ ಪಿಯುಸಿಯ ಸಮಾಜ ಶಾಸ್ತ್ರ ಮತ್ತು ರಾಸಾಯನ ಶಾಸ್ತ್ರ ಪರೀಕ್ಷೆಯನ್ನು ಹಾಗೂ ಎಸ್.ಎಸ್.ಎಲ್.ಸಿ ಪ್ರಿಪ್ರೇಟರಿ ಹಿಂದಿ ಪರೀಕ್ಷೆಯನ್ನು  ಮುಂದೂಡಲಾಗಿತ್ತು .
ಸದಾ ರೈತರಿಂದ ಗಿಜಿಗುಡುತ್ತಿದ್ದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ರೈತರಿಲ್ಲದೆ, ವ್ಯಾಪಾರಿಗಳು ಇಲ್ಲದೆ ಬಿಕೋ ಅನ್ನುತ್ತಿತ್ತು ಮತ್ತು ಪಟ್ಟಣ ಪಂಚಾಯತಿ ಕೂಡಾ ಬೀಗ ಹಾಕಲಾಗಿತ್ತು, ಡಾ.ಬದ್ಯಾನಾಯ್ಕ್ ಆಡಳಿತಾಧಿಕಾರಿ ಮತ್ತು ಕೆಲ ಸಿಬ್ಬಂದಿಗಳು ಹಾಜರಿಯಲ್ಲಿ ತುರ್ತು ಸೇವೆಗಳು ಹೊರತು ಪಡಿಸಿ ಬೇರೆ ಸೇವೆಗಳಿಲ್ಲದ ಕಾರಣ ಸಮುದಾಯ ಆರೋಗ್ಯ ಕೇಂದ್ರವು ಕೂಡಾ ಬಿಕೋ ಅನ್ನುತ್ತಿತ್ತು.ಕಚೇರಿ ಮತ್ತು ಇತರೆ ಕೆಲಸ ಕಾರ್ಯಗಳಿಗೆ ಜನ ಸಂದಣಿಯೂ ಪಟ್ಟಣದಲ್ಲಿ ಕಮ್ಮಿ ಇತ್ತು. ಇಡೀ ಪಟ್ಟಣದ ಬಂದ್ ನಂತೆ ಭಾಸವಾಗುತ್ತಿತ್ತು.

One attachment • Scanned by Gmail