ನಿಧಿ ಶೋಧ: ೧೦ ಮಂದಿ ಬಂಧನ

ತುಮಕೂರು, ಡಿ. ೨೧- ಸಿರಾ ತಾಲ್ಲೂಕಿನ ಗಾಣದಹುಣಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧಿಸಿ ಕಳವು ಮಾಡಲು ಯತ್ನಿಸಿದ ೧೦ ಮಂದಿ ಆರೋಪಿಗಳನ್ನು ತಾವರೆಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿಧಿ ಶೋಧದ ಸಲುವಾಗಿ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಪೂಜಾ ಸಾಮಗ್ರಿಗಳು ಹಾಗೂ ಸ್ಪೋಟಕ ವಸ್ತುಗಳನ್ನು ಉಪಯೋಗಿಸಿದ್ದರು. ಈ ಸಂಬಂಧ ಬುಕ್ಕಾಪಟ್ಟಣ ಹೇಬಳಿ ರಾಜಸ್ವ ನಿರೀಕ್ಷಕರಾದ ಶ್ರೀನಿವಾಸಯ್ಯ ನೀಡಿದ ದೂರಿನ ಮೇರೆಗೆ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತಿಪಟೂರಿನ ವಿಜಯಕುಮಾರ್, ಹಗರಿಬೊಮ್ಮನಹಲ್ಳಿಯ ಪರಶುರಾಮ್, ಸಿರಾ ತಾಲ್ಲೂಕಿನ ಗುಡ್ಡರಹಟ್ಟಿಯ ಗಿರಿಯಪ್ಪ, ಹೊಸಕೋಟೆಯ ಮಂಜುನಾಥ್, ಕೋಲಾರ ಜಿಲ್ಲೆಯ ಬೈರೇನಹಳ್ಳಿಯ ಸಂತೋಷ್‌ಕುಮಾರ್, ಅರಸೀಕೆರೆ ತಾಲ್ಲೂಕಿನ ತಿರುಪತಿ ಹಳ್ಳಿಯ ಕುಮಾರನಾಯ್ಕ್, ಸಿರಾ ತಾಲ್ಲೂಕಿನ ಕಲ್ಲುಕೋಟೆಯ ನಾಗಪ್ಪ, ಶಿವಮೊಗ್ಗದ ದೇವದಾಸ್. ಬಾಗೇಪಲ್ಲಿಯ ಶ್ರೀನಿವಾಸ ಹಾಗೂ ಓಬಳರೆಡಿಡು ಎಂಬುವರೇ ಬಂಧಿತ ಆರೋಪಿಗಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಸಿರಾ ಗ್ರಾಮಾಂತರ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, ೩ ಬೈಕ್‌ಗಳು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ. ವಂಶಿಕೃಷ್ಣ ತಿಳಿಸಿದ್ದಾರೆ.
ಡಿವೈಎಸ್‌ಪಿ ಕುಮಾರಪ್ಪ ಮಾರ್ಗದರ್ಶನದಲ್ಲಿ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಮಹಾಲಕ್ಷ್ಮಮ್ಮ, ಅವಿನಾಶ್, ಸಿಬ್ಬಂದಿಗಳಾದ ಸಿ.ಪಿ.ಕಿರಣ್‌ಕುಮಾರ್, ರೇಣುಕಾ, ಕೆ. ಸುದರ್ಶನ್, ಪುರಷೋತ್ತಮ್, ಮಹೇಶ್, ಸಂತೋಷ್‌ಕುಮಾರ್, ಎಸ್ಪಿ ಕಚೇರಿಯ ನರಸಿಂಹರಾಜು, ಜಗದೀಶ್ ರವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ ಅಭಿನಂದಿಸಿದ್ದಾರೆ.