ನಿಧಿ ಆಸೆಗಾಗಿ ವಾಣಿಭದ್ರೇಶ್ವರ ಲಿಂಗ ಧ್ವಂಸ: ಕ.ರ.ವೇ ಖಂಡನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಅ.25: ನಿಧಿ ಆಸೆಗಾಗಿ ದುಷ್ಕರ್ಮಿಗಳು ಇತಿಹಾಸ ಪ್ರಸಿದ್ಧ ವಾಣಿಭದ್ರೇಶ್ವರ ಲಿಂಗವನ್ನು ಧ್ವಂಸ ಮಾಡಿರುವುದು ಖಂಡನೀಯ ಈ ಕೃತ್ಯ ಎಸಿಗಿದವರನ್ನು ಕೂಡಲೇ ಬಂಧಿಸಿ ಕಠೀಣ ಶಿಕ್ಷೆ ವಿಧಿಸುವಂತೆ ಕರವೇ ಪ್ರವೀಣ್ ಶೇಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಆಗ್ರಹಿಸಿದ್ದಾರೆ.
ತಾಲೂಕಿನ ಸಿದ್ದಿಕೇರಿ ಮಲ್ಲಾಪೂರ ಮಧ್ಯದಲ್ಲಿ ಬರುವ ವಾಣಿಭದ್ರೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಏಳು ಗುಡ್ಡ ಪ್ರದೇಶದಲ್ಲಿರುವ ವಾಣಿ ಭದ್ರೇಶ್ವರ ದೇವಸ್ಥಾನವಿದ್ದು ಇಲ್ಲಿ ಹಂಪಿಯಲ್ಲಿ ಶ್ರೀ ಪಂಪಾ ವಿರುಪಾಕ್ಷೇಶ್ವರ ಮೂರ್ತಿ ಸ್ಥಾಪನೆಯ ಸಂಧರ್ಭದಲ್ಲಿ ಹಂಪಿಯ ಎಂಟು ದಿಕ್ಕುಗಳಲ್ಲಿ ಶಿವಲಿಂಗ ದೇವಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಇತಿಹಾಸ ಪ್ರಸಿದ್ಧವಾದ ವಾಣಿ ಭದ್ರೇಶ್ವರ ದೇವಾಲಯವೂ ಕೂಡ ಒಂದಾಗಿರುತ್ತದೆ.
ಆದರೆ ಸದರಿ ನಮ್ಮ ಹಿಂದು ಪರಂಪರೆಯ ದೇವಸ್ಥಾನಗಳನ್ನು ನಿಧಿಗಳ್ಳರು ದೇವಾಲಯಗಳನ್ನು ಧ್ವಂಸ ಮಾಡುತ್ತಿರುವುದು ತುಂಭಾ ಆಘಾತಕಾರಿ ವಿಷಯವಾಗಿದೆ ಆದರೆ ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತವು ಇಂತಹ ದೇವಾಲಯಗಳಾದ ಕೊಪ್ಪಳ ಜಿಲ್ಲೆಯ ಐತಿಹಾಸಿಕ ದೇವಾಲಯ ಸ್ಮಾರಕಗಳಾದ ಗಂಡುಗಲಿ ಕುಮಾರರಾಮ ಸ್ಮಾರಕ, ಹೇಮಗುಡ್ಡ ದೇವಸ್ಥಾನ, ಶ್ರೀ ಕನಕಾಚಲಪತಿ ದೇವಸ್ಥಾನದ ಸುತ್ತಲೂ ಇರುವ ಸ್ಮಾಕರಗಳನ್ನು, ತಾವರಗೇರಾ ಹತ್ತಿರ ಇರುವ ಪುರದ ಶ್ರೀ ಸೋಮನಾಥೇಶ್ವರ ದೇವಾಲಯಗಳನ್ನು ಹಾಗೂ ನವಬೃಂದಾನವನ, ಪಂಪಾಸರೋವರ, ಅಂಜನಾದ್ರಿ ಬೆಟ್ಟ, ಆದಿಶಕ್ತಿ ದುರ್ಗಾಮಂದಿರ, ವೃಷಿಮುಖ ಪರ್ವತ ಇನ್ನೂ ಮುಂತಾದ ಐತಿಹಾಸಿಕ ದೇವಸ್ಥಾನಗಳನ್ನು ಮತ್ತು ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು ಮತ್ತು ಇಂತಹ ನಿಧೀಗಳ್ಳರನ್ನು ಪತ್ತೆ ಹಚ್ಚಿ ಸರಿಯಾದ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಸದರಿ ನಿಧಿಗಳ್ಳರನ್ನು ಪತ್ತೆ ಹಚ್ಚದೇ ಮತ್ತು ಪುರಾತನ ದೇವಾಲಯಗಳ ಸಂರಕ್ಷಣೆಗೆ ಮಹತ್ವವನ್ನು ನೀಡದೇ ಇದ್ದ ಪಕ್ಷದಲ್ಲಿ ನಮ್ಮ ಕ.ರ.ವೇ. ಸಂಘಟನೆಯಿಂದ ಸಂಬಂಧಪಟ್ಟ ಕಾರ್ಯಾಲಯದ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.