ನಿಧಿಗೆ ಅಗೆತ – ಗ್ಯಾಂಗ್ ಸೆರೆ

ಚಿತ್ತೂರು(ಆಂಧ್ರಪ್ರದೇಶ),ಮೇ.೨-ಗುಪ್ತ ನಿಧಿಗಳಿಗಾಗಿ ದೇವಾಲಯಗಳನ್ನು ಅಗೆಯುತ್ತಿದ್ದ ಕಳ್ಳರ ತಂಡವನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕೆಲವು ಉಪಕರಣಗಳು, ಎಂಟು ಮೊಬೈಲ್ ಫೋನ್ ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು
ಮದನಪಲ್ಲೆ ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ಮನೋಹರ್ ಆಚಾರಿ ತಿಳಿಸಿದ್ದಾರೆ. ಬಂಧಿತ ಗ್ಯಾಂಗ್ ರಾಜ್ಯದ ಪ್ರಾಚೀನ ದೇವಾಲಯಗಳನ್ನು ಗುರಿಯಾಗಿಸಿ ಗುಪ್ತವಾದ ನಿಧಿಗಳಿಗಾಗಿ ಅಗೆಯುತ್ತಿತ್ತು.
ಇತ್ತೀಚೆಗೆ ಏಪ್ರಿಲ್ ೨೫ರಂದು ಈ ತಂಡ ಅದವಿಪಲ್ಲೆ ಯೋಜನಾ ಪ್ರದೇಶದ ಬಳಿಯ ಭಗವಾನ್ ಮಲ್ಲೇಶ್ವರ ದೇವಸ್ಥಾನದ ಮೇಲೆ ದಾಳಿ ಮಾಡಿತ್ತು.
ಹಿಂಬದಿಯ ಗೋಡೆಯನ್ನು ನಾಶಪಡಿಸಿ ಅವರು ದೇವಾಲಯವನ್ನು ಪ್ರವೇಶಿಸಿ, ವಿಗ್ರಹಗಳನ್ನು ಸ್ಥಳಾಂತರಿಸಿ, ನಿಧಿಗಾಗಿ ಹುಡುಕಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಏಳು ಜನರನ್ನು ಬಂಧಿಸಲಾಗಿದ್ದು, ಇತರ ನಾಲ್ವರು ಆರೋಪಿಗಳನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದರು.