ಕಲಬುರಗಿ,ಜು.31-ಅತೀ ವೇಗವಾಗಿ ಹೋಗುತ್ತಿದ್ದ ಫೋರ್ ವ್ಹೀಲರ್ ಚಾಲಕನಿಗೆ “ನಿಧಾನವಾಗಿ ಹೋಗು” ಎಂದು ಹೇಳಿದಕ್ಕೆ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಬಿದ್ದಾಪುರ ಕಾಲೋನಿಯ ಪಾಂಡುರಂಗ ಜಾಧವ್ ಅವರು ಮಗನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ತೆಗೆಸಿಕೊಂಡು ಬರಲು ಅಳಿಯ ವಸಂತ ರಾಠೋಡ್ ಜೊತೆಗೆ ಬಿದ್ದಾಪುರ ಕಾಲೋನಿ ಕಡೆಗೆ ಹೋಗುತ್ತಿದ್ದಾಗ ಅತೀ ವೇಗದಿಂದ ಹೋಗುತ್ತಿದ್ದ ಫೋರ್ ವ್ಹೀಲರ್ ಚಾಲಕನನ್ನು “ಸ್ಲೋ ಬಾ ಅಣ್ಣಾ” ಅಂದಿದ್ದಾರೆ. ಇಷ್ಟದಿಂದಕ್ಕೆ ಫೋರ್ ವ್ಹೀಲರ್ ಚಾಲಕ ಪಾಂಡುರಂಗ ಜಾಧವ್ ಅವರನ್ನು ಹಿಂಭಾಲಿಸಿ ಬೈಕ್‍ಗೆ ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೆ ಆತನ ಕಡೆಯ ಇನ್ನೂ ಮೂರು ಜನ ಸೇರಿ ಮನಬಂದಂತೆ ಥಳಿಸಿ ಪಕ್ಕದಲ್ಲಿ ಬಿದ್ದಿದ್ದ ಫರ್ಸಿ ಕಲ್ಲನ್ನು ಮೈಮೇಲೆ ಎತ್ತಿ ಹಾಕಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಮಗು ಅಳುತ್ತಿರುವುದನ್ನು ನೋಡಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಪಾಂಡುರಂಗ ಅವರು ಜಾಧವ್ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.