ಸಂಜೆವಾಣಿ ವಾರ್ತೆ
ಕುಕನೂರು, ಜು.17: ಇಲ್ಲಿಯ ದೇವಿ ನಗರದ ಪಾರಮ್ಮ ಸಬರದ (೫೫) ಸೋಮವಾರ ಬೆಳಿಗ್ಗೆ ನಿಧನ ರಾದರು. ಪತಿ ಬಸವರಾಜ್ ಸಬರದ ಸೇರಿ ಇಬ್ಬರು ಪುತ್ರರು ಹಾಗೂ ಓವ೯ ಇಬ್ಬರು ಪುತ್ರಿಯರನ್ನು ಹಾಗೂ ಸೊಸೆ ಪಟ್ಟಣ ಪಂಚಾಯತ್ ೧೩ ನೆಯ ವಾಡಿ೯ನ ಸದಸ್ಯೆ ಲಕ್ಷ್ಮಿ ವೀರೇಶ್ ಸಬರದ ಸೇರಿ ಅಪಾರ ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ಕುಕನೂರಿನ ರುದ್ರಭೂಮಿ ಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಸಕ ಬಸವರಾಜ್ ರಾಯರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ,ಮುಖಂಡರಾದ ನವೀನ್ ಗುಳಗನ್ನವರ್,ಅನಿಲ್ ಆಚಾರ, ಮಹಾಂತೇಶ್ ಹೂಗಾರ್, ಮಂಜುನಾಥ್ ನಾಡಗೌಡರ್ರ, ಅಂದಪ್ಪ ಜವಳಿ, ವೀರಣ್ಣ ಅಣ್ಣಿಗೇರಿ , ಪ್ರಕಾಶ್ ಬೊರಣ್ಣವರ್, ಪಟ್ಟಣ ಪಂಚಾಯತ್ ಸವ೯ಸದಸ್ಯರೂ ಮೊದಲಾದವರು ಸಂತಾಪ ಸೂಚಿಸಿದ್ದಾರೆ.