ಸಂಜೆವಾಣಿ ವಾರ್ತೆ
ಸಂಡೂರು:ಜು:8: ತಾಲೂಕಿನ ತಾಳೂರು ಗ್ರಾಮದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮೇಘನಾಥ ಅವರ ಸಹೋದರ ವೀರಶೈವಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಅದ ಕೆ.ಸೋಮಶೇಖರ(55) ಹೃದಯಾಘಾತದಿಂದ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ 2 ಪುತ್ರರು, 1 ಪುತ್ರಿ, 5 ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ, ಮೃತರಿಗೆ ತಾಲೂಕು ವೀರಶೈವ ಸಮಾಜದ ಗಣ್ಯರಾಧ ನಾಗರಾಜ, ಕೋರಿ ಸೂಗಪ್ಪ, ಇತರ ಎಲ್ಲಾ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು. ಇಡೀ ಗ್ರಾಮದ ಜನತೆ ಸಾಮೂಹಿಕವಾಗಿ ಸೇರಿ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.