ನಿಧನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 24 :-  ತಾಲೂಕಿನ ಹುಡೇಂ ಗ್ರಾಮದ ನಿವಾಸಿ ಹಾಗೂ ಪ್ರೌಢಶಾಲಾ ನಿವೃತ್ತ ನೌಕರ ಪೂಜಾರಿ ಸಣ್ಣ ತಿಪ್ಪೇಸ್ವಾಮಿ (75) ಅವರು ಅನಾರೋಗ್ಯದಿಂದ ಇಂದು  ಬೆಳಗ್ಗೆ ನಿಧನರಾದರು.
ಮೃತರಿಗೆ ಪತ್ನಿ ಗ್ರಾಪಂ ಮಾಜಿ ಅಧ್ಯಕ್ಷೆ ಎಚ್.ಕೊಲ್ಲಾರಮ್ಮ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು  ಸಂಜೆ 4 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪೂಜಾರಿ ಸಣ್ಣ ತಿಪ್ಪೇಸ್ವಾಮಿ ಅವರು ಚಳ್ಳಕೆರೆ ತಾಲೂಕು ಮುಷ್ಟಲಗುಮ್ಮಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಸಂತಾಪ: ಹುಡೇಂ ಗ್ರಾಮದ ಪೂಜಾರಿ ಸಣ್ಣ ತಿಪ್ಪೇಸ್ವಾಮಿ ಅವರ ನಿಧನಕ್ಕೆ ಸಹಾಯಕ ಎಂಜಿನಿಯರ್ ಎಚ್.ಬಿ.ತಿಪ್ಪೇಸ್ವಾಮಿ, ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿ, ಶಿಕ್ಷಕರಾದ ಎಚ್.ವಿ.ಬಿ.ಶಿವಶಂಕರಪ್ಪ, ವಕೀಲರಾದ ಡಿ. ಗುರುಮೂರ್ತಿ, ಗುತ್ತಿಗೆದಾರರಾದ ಎಚ್.ಕೆ.ಕಲ್ಲೇಶಪ್ಪ, ಹುಡೇಂ ಶಂಕರ್ ಪೂಜಾರ್, ಶರಣಪ್ಪ ಪೂಜಾರ್, ಗಿಡ್ಡಜ್ಜರ ನಾಗರಾಜ, ಹಂಪಣ್ಣ, ಕರುನಾಡು ಸಂಸ್ಥೆಯ ಅಧ್ಯಕ್ಷರಾದ ಕವಿತಾ ಕೃಷ್ಣಮೂರ್ತಿ, ಸಾರಿಗೆ ಇಲಾಖೆ ನೌಕರ ಎಚ್.ಬಿ.ಮಹಾಂತಪ್ಪ, ಬೆಸ್ಕಾಂ ನೌಕರ ಎಚ್.ಬಿ.ಏಕಾಂತ, ಎಚ್.ಆರ್.ಓಬಣ್ಣ, ಎಚ್.ಬಿ.ರುದ್ರಮುನಿ ಹಾಗೂ ಶ್ರೀ ಕಂಚೋಬಳೇಶ್ವರ ಸ್ವಾಮಿಯ ಮೂರು ಅಜ್ಜನವರು ಸೇರಿ ಇತರರು ಸಂತಾಪ ಸೂಚಿಸಿದ್ದಾರೆ.