
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 12 :- ತಾಲೂಕಿನ ಚಿಕ್ಕಜೋಗಿಹಳ್ಳಿ ನಿವಾಸಿ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ಪರಿವೀಕ್ಷಕ ಲಿಂಬ್ಯಾನಾಯ್ಕ(87) ಆನಾರೋಗ್ಯದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಆರೋಗ್ಯ ಇಲಾಖೆ ಸೇರಿದ ಮೇಲೆ ಮೂರು ದಶಕ ಕಾಲ ಗ್ರಾಮೀಣ ಜನರ ಆರೋಗ್ಯ ಸೇವೆ ಸಲ್ಲಿಸುವ ಮೂಲಕ ಜನಸಾಮಾನ್ಯರಲ್ಲಿ ಹೆಸರು ಮಾಡಿದವರಾಗಿದ್ದರು.
ಮೃತರಿಗೆ ಓರ್ವ ಪುತ್ರಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಆಪಾರ ಬಂಧುಬಳಗವಿದೆ.
ಮೃತರ ಅಂತ್ಯಕ್ರಿಯೆ ಮಂಗಳವಾರವಾದ ಇಂದು ಹುಟ್ಟೂರಾದ ತಾಲೂಕಿನ ಬಂಡೆಬಸಾಪುರ ತಾಂಡಾದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.