ನಿಧನ


ಸಂಜೆವಾಣಿ ವಾರ್ತೆ
ಸಂಡೂರು:ಅ: 16:  ತಾಲೂಕಿನ ಹಿರೇಕೆರೆಯಾಗಿನಹಳ್ಳಿಯ ಗುತ್ತಿಗೆದಾರರು, ಕಾಂಗ್ರೇಸ್ ಮುಖಂಡರಾದ ಜಯರಾಮಪ್ಪ ಅವರ ತಂದೆ ಪೂಜಾರಿ ಬಾಲಪ್ಪ (82)ನಿಧನರಾಗಿದ್ದಾರೆ. 
ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು ಮೃತರಿಗೆ 4 ಗಂಡು ಮಕ್ಕಳು, 3 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ, ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮಪಂಚಾಯಿತಿ ಅಧ್ಯಕ್ಷರುಗಳು, ಸದಸ್ಯರು, ಹಲವಾರು ಗಣ್ಯರು ಅಂತ್ಯೆಕ್ರಿಯೆಯಲ್ಲಿ ಭಾಗಿಯಾಗಿ ನಮನ ಸಲ್ಲಿಸಿದರು.
ಮೃತರ ಅಂತ್ಯೆ ಕ್ರಿಯೆಯನ್ನು ಹಿರೇಕೆರೆಯಾಗಿನಹಳ್ಳಿ ಗ್ರಾಮದಲ್ಲಿಯೇ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಎಲ್ಲಾ ಗಣ್ಯರು, ಶಾಸಕರು, ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಇತರ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.
ತಾಲೂಕಿನ ಹಿರೇಕೆರೆಯಾಗಿನಹಳ್ಳಿಯ ಗುತ್ತಿಗೆದಾರರು, ಕಾಂಗ್ರೇಸ್ ಮುಖಂಡರಾದ ಜಯರಾಮಪ್ಪ ಅವರ ತಂದೆ ಪೂಜಾರಿ ಬಾಲಪ್ಪ (82)ನಿಧನರಾಗಿದ್ದಾರೆ.