ನಿಧನ

ಸಂಜೆವಾಣಿ ವಾರ್ತೆಮೊಳಕಾಲ್ಮೂರು,ಆ.16: ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಬಿ.ಕೆ. ಇಸ್ಮಾಯಿಲ್ (64) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧಾನರಾಗಿರುತ್ತಾರೆ.ಇಂದು ಬೆಳಿಗ್ಗೆ ಸುಮಾರು 7-45 ಸಮಯದಲ್ಲಿ ಮನೆಯಿಂದ ಹೊರ ಬಂದು ತಮ್ಮ ಆತ್ಮಿಯರೊಂದಿಗೆ ಮಾತನಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೆ ಅವರನ್ನು ಬಳ್ಳಾರಿ ಯ ಸಿ. ಟಿ. ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ್ದ ವೈದ್ಯರು ಹೃದಯಾಘಾತದಿಂದ ನಿಧಾನರಾಗಿರುತ್ತಾರೆ ಎಂದು ತಿಳಿಸಲಾಗಿದ್ದು, ಮೃತ ಬಿ. ಕೆ. ಇಸ್ಮಾಯಿಲ್ ರವರ ಪಾರ್ಥಿವ ಶರೀರ ವನ್ನು ರಾಂಪುರದ ಮಸೀದಿ ಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ನಂತರ ಮೃತರ ಸ್ವಗ್ರಾಮ ವಾದ ಮಂಗಳೂರಿಗೆ ಕೊಂಡೊಯ್ಯಲಾಗುದು ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಜನಪ್ರಿಯ ಶಾಸಕರಾದ ಎನ್.ವೈ ಗೋಪಾಲಕೃಷ್ಣ ಬೇಟಿ ನೀಡಿ ಮೃತರಿಗೆ  ಸಂತಾಪ  ಸೂಚಿಸಿ  , ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಪ ಪಂ ಸ ಹಾಗೂ ಗುತ್ತಿಗೆದಾರರಾದ ಎಸ್. ಖಾದರ್, ಕಲೀಲ್, ನಜೀರ್, ನೂರುಬಾಷ,  ಪ ಪಂಚಾಯಿತಿ ಸದಸ್ಯರಾದ ಎಂ. ಅಬ್ದುಲ್ಲಾ, ಗುತ್ತಿಗೆದಾರ ಅಜಂತುಲ್ಲಾ, ಇನ್ನು ಮುಂತಾವರಿದ್ದರು.ಮೃತರು, ಮಡದಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಒಬ್ಬ ಗಂಡು ಮಗನನ್ನು ಮತ್ತು ಸಾವಿರಾರು ಆತ್ಮೀಯ ಬಂಧುಗಳನ್ನು, ಸ್ನೇಹಿತರನ್ನು ಆಗಲಿರುತ್ತಾರೆ.