ನಿಧನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 22 : – ತಾಲೂಕಿನ ಹುಡೇಂ ಗ್ರಾಮದ ಕಿವುಡು ಬೋಸಪ್ಪರ ಗಂಗಪ್ಪ (60) ಅವರು ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ  ಅತೀ ಕಡಿಮೆ ರಕ್ತದೊತ್ತಡದಿಂದ  ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ನಾಲ್ವರು ಪುತ್ರರು ಸೇರಿ ಅಪಾರ ಬಂಧು- ಬಳಗವಿದೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಹುಡೇಂ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.
ಕಿವುಡು ಬೋಸಪ್ಪರ ಗಂಗಪ್ಪ ಅವರ ನಿಧನಕ್ಕೆ ಹುಡೇಂ ಗ್ರಾಮದ ಕೋಣನವರ ರಾಜಣ್ಣ ಸಾಹುಕಾರ, ನಿವೃತ್ತ ಪೊಲೀಸ್ ನೇಕಾರ ಗುರುಮೂರ್ತಿ, ಶಿವರುದ್ರಣ್ಣರ ನಾಗರಾಜ, ಎನ್.ಕರಿಬಸಪ್ಪ ಮೇಷ್ಟ್ರು ಇಂಜಿನಿಯರ್ ಎಚ್.ಬಿ.ತಿಪ್ಪೇಸ್ವಾಮಿ, ತಾಪಂ ಮಾಜಿ ಅಧ್ಯಕ್ಷೆ ಆಲೂರು ನಾಗರತ್ನಮ್ಮ ಲಿಂಗಪ್ಪ, ತಾಪಂ ಮಾಜಿ ಸದಸ್ಯ, ಹುಡೇಂ ಪಾಪನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಲ್ಲಹಳ್ಳಿ ಭಾಗ್ಯಮ್ಮ ಶಿವಣ್ಣ, ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿ, ಭೀಮಣ್ಣ ಗಜಾಪುರ, ಸಂಜೆವಾಣಿ ನಾಗರಾಜ, ಭೀಮಸಮುದ್ರ ರಂಗನಾಥ, ದಯಾನಂದ ಸಜ್ಜನ್, ಬಯಲು ತುಂಬರಗುದ್ದಿ ಅಜಯ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

One attachment • Scanned by Gmail