ನಿಧನದ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ: ಶಿವರಾಜ್ ಕುಮಾರ್

ಬೆಂಗಳೂರು,ಡಿ.8- ಹಿರಿಯ ನಟಿ ಲೀಲಾವತಿ ನಿಧನದ ವಿಷಯವನ್ನು ನಂಬಲು ಆಗುತ್ತಿಲ್ಲ ಎಂದು ಹಿರಿಯ ನಟ ಶಿವರಾಜ್ ಕುಮಾರ್ ಇಂದಿಲ್ಲಿ ಹೇಳಿದ್ದಾರೆ.

ವಿನೋದ್ ಅವರು ತಾಯಿ ಜೊತೆ ಒಳ್ಳೆಯ ಬಾಂಡಿಂಗ್ ಹೊಂದಿದ್ದರು. ಈ ವಿಷಯವನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ.‌ಇದು ಅತ್ಯಂತ ನೋವಿನ‌ ಸಂಗತಿ ಎಂದಿದ್ದಾರೆ.

ಲೀಲಾವತಿ ಅವರು ನಿಧನರಾದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದರು.

ವಿನೋದ್ ಅವರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ . ಹೆಚ್ಚಿಗೆ ಮಾತನಾಡಲು ಮನ್ಸಸ್ಸು ಬಾರವಾಗುತ್ತಿದೆ ಎಂದಿದ್ದಾರೆ.

ಚಿತ್ರರಂಗದ ಗಣ್ಯರಿಂದ ನಮನ

ಹಿರಿಯ ನಟಿಯರಾದ ಉಮಾಶ್ರೀ, ಶೃತಿ, ವಿನಯ ಪ್ರಸಾದ್, ಲಹರಿ ಸಂಸ್ಥೆಯ ವೇಲು, ಸಾಹಿತಿ ಕೆ‌.ಕಲ್ಯಾಣ್ ಸೇರಿದಂತೆ ಅನೇಕರು ಲೀಲಾವತಿ ಅವರ ಒಡನಾಟ ಸ್ಮರಿಸಿಕೊಂಡಿದ್ದಾರೆ.