ನಿತ್ಯ ಪರಿಸರ ದಿನವಾಗಿ ಆಚರಿಸಬೇಕು: ಬಸವರಾಜ ಬಲ್ಲೂರ

ಬೀದರ:ಜೂ.6:ಪರಿಸರ ಸಂರಕ್ಷಣೆ ವರ್ಷಕ್ಕೊಮ್ಮೆ ಆಚರಿಸುವ ವಿಶ್ವ ಪರಿಸರ ದಿನಕ್ಕೆ ಸೀಮಿತವಾಗದೆ ನಿತ್ಯ ಪರಿಸರ ದಿನವಾಗಿ ಆಚರಿಸಬೇಕು ಎಂದು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ನುಡಿದರು
ಅವರು ಕರಾಶಿ ಸಂಸ್ಥೆಯ ಕರ್ನಾಟಕ ಪದವಿಪೂರ್ವ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪರಿಸರವೆಂದರೆ ಕೇವಲ ಮರ ನೆಡುವುದೇ ಅಲ್ಲ ನಮ್ಮ ಸುತ್ತಲಿನ ಪಂಚಭೂತಗಳನ್ನು ಮಲೀನಗೊಳಿಸದಂತೆ ಎಚ್ಚರವಹಿಸಬೇಕು. ಇಂದು ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣ ಇಂದಿನ ತುರ್ತು ಅಗತ್ಯವಾಗಿದೆ. ಇದೆಲ್ಲ ಒಬ್ಬರಿಂದ ಆಗುವ ಕೆಲಸವಲ್ಲ ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಅಂದಾಗ ಸ್ವಸ್ಥ ಪರಿಸರ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು

ವಿಶೇಷ ಉಪನ್ಯಾಸನೀಡಿದ ಉಪನ್ಯಾಸಕರಾದ ಶ್ರೀದೇವಿ ಮೇತ್ರೆ ಮಾತನಾಡುತ್ತಾ ಇಂದು ಎಲ್ಲೆಲ್ಲೂ ಪರಿಸರ ಮಾಲಿನ್ಯ ತಾಂಡವಾಡುತ್ತಿದೆ ನಾಗರಿಕರಾದವರು ಕೂಡ ಅನಾಗರಿಕರಂತೆ ವರ್ತಿಸುತ್ತಾ ನೆಲ ಜಲ ಮತ್ತು ವಾಯು ಒಂದನ್ನು ಬಿಡದೆ ಅವ್ಯಾಹತವಾಗಿ ಮಲಿನಗೊಳಿಸುತ್ತಿದ್ದೇವೆ ಇದನ್ನೇ ಮುಂದುವರಿಸಿಕೊಂಡು ಹೋದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮುಂದಿನ ಪೀಳಿಗೆಗೆ ಯಾವುದನ್ನು ಶುದ್ಧ ರೀತಿಯಲ್ಲಿ ಕೊಡಲು ಸಾಧ್ಯವಿಲ್ಲ ಎಂದು ನುಡಿದರು

ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಹೇಶ್ ಬಿರಾದಾರ್ ಉದ್ಘಾಟಿÀಸಿದರು. ಉಪನ್ಯಾಸಕರು ಹಾಗೂ ವಿದ್ಯಾಥಿಗಳು, ಭಾಗವಹಿಸಿದ್ದರು. ಉಪನ್ಯಾಸಕರಾದ ಜಗನ್ನಾಥ ಕಮಲಾಪುರೆ ಸ್ವಾಗತಿಸಿದರೆ ಸಚಿನ ವಿಶ್ವಕರ್ಮ ನಿರೂಪಿಸಿದರು. ನಿಜಗುಣ ಶಂಭು ವಂದಿಸಿದರು.