ನಿತೀಶ್ ಸಂಪುಟದಲ್ಲಿ ಬಿಜೆಪಿಗೆ ಸಿಂಹಪಾಲು

ಪಾಟ್ನಾ,ನ.16- ಬಿಹಾರದ ನೂತನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದು ಜೆಡಿಯುಗೆ 12, ಬಿಜೆಪಿಗೆ 18, ವಿಐಪಿ ಮತ್ತು ಎಚ್ ಎಎಂ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಗಲಿದೆ.

243 ವಿಧಾನಸಭೆಯ ಸಂಖ್ಯಾಬಲ ದಲ್ಲಿ ಶೇಕಡಾ 15ರಷ್ಟು ಸಚಿವರನ್ನು ಮಾಡಲು ಅವಕಾಶ ಇರುವ ಹಿನ್ನೆಲೆಯಲ್ಲಿ ಒಟ್ಟಾರೆ ಎನ್ ಡಿಎ ಮಿತ್ರಪಕ್ಷಗಳಿಗೆ ಸಚಿವ ಸ್ಥಾನ ಹಂಚಿಕೆ ಆಗಲಿದ್ದು ಅದರಲ್ಲೂ ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿಗೆ ಸಂಪುಟದಲ್ಲಿ ಸಿಂಹಪಾಲು ಸಿಗಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಈಗ 18 ಸೇರಿದಂತೆ ಒಟ್ಟಾರೆ 20 ಸಚಿವ ಸ್ಥಾನ ಸಿಗಲಿದೆ. 43 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಯು ಪಕ್ಷಕ್ಕೆ 12 ಸಚಿವ ಸ್ಥಾನ ಸಿಗಲಿದ್ದು ಅದಕ್ಕೆ ಒಟ್ಟಾರೆ 14 ಸ್ಥಾನಗಳು ಸಿಗುವ ನಿರೀಕ್ಷೆಯಿದೆ.

ಇನ್ನುಳಿದ ಮಿತ್ರಪಕ್ಷಗಳಾದ ಹಿಂದೂಸ್ತಾನಿ ಅವಾಮಿ ಮೋರ್ಚಾ ಮತ್ತು ವಿಕಾಸ್ ಶೀಲ್ ಇನ್ ಸಾನ್ ಪಕ್ಷಕ್ಕೆ ಒಂದೊಂದು ಸ್ಥಾನ ಖಚಿತವಾಗಿದೆ.ಎನ್ ಡಿಎ ನಾಯಕರು ತಲಾ 7 ಶಾಸಕರಿಗೆ ಇಬ್ಬರು ಸಚಿವರನ್ನಾಗಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಅದರಂತೆ ಶಾಸಕರ ಸಂಖ್ಯಾಬಲ ಆಧಾರದ ಮೇಲೆ ಮಿತ್ರಪಕ್ಷಗಳಿಗೆ ಸಚಿವ ಸ್ಥಾನ ಸಿಗಲಿದೆ ಅದರಲ್ಲೂ ಅತಿ ಹೆಚ್ಚಿನ ಸ್ಥಾನ ಗೆದ್ದಿರುವ ಬಿಜೆಪಿಗೆ ಸಿಂಹಪಾಲು ಸಿಗಲಿದೆ.

243 ಸದಸ್ಯಬಲದ ವಿಧಾನಸಭೆಯಲ್ಲಿ ಶೇಕಡ 15ರಷ್ಟು ಸಚಿವರಾಗುವ ಅವಕಾಶ ಮುಖ್ಯಮಂತ್ರಿ ಸೇರಿದಂತೆ ಒಟ್ಟಾರೆ 36 ಮಂದಿ ಸಚಿವರಾಗುವ ಅವಕಾಶವಿದೆ‌.

ತಾರಕಿಶೋರ್ ಡಿಸಿಎಂ:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 74 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್ ಡಿಎ ಮಿತ್ರ ಪಕ್ಷಗಳಲ್ಲಿ ಅತಿ ಹೆಚ್ಚಿನ ಸ್ಥಾನ ಗೆದ್ದಿರುವ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ತಾರಕೇಶ್ ಅವರು ಪ್ರಸಾದ್ ಅವರನ್ನು ಆಯ್ಕೆ ಮಾಡಿದೆ.

ಅವರು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಕಳೆದ 11 ವರ್ಷಗಳಿಂದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಬಿಜೆಪಿ ಹೈಕಮಾಂಡ್ ಯಾವ ಸ್ಥಾನಮಾನವಿಲ್ಲದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.