ನಿತೀನ ಗುತ್ತೇದಾರರಿಂದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

ಅಫಜಲಪುರ:ಜ.12: ತಾಲೂಕಿನ ಬೂತ್ ವಿಜಯ ಅಭಿಯಾನದ ಅಂಗವಾಗಿ ಬುಧವಾರ ಅಫಜಲಪುರ ವಿಧಾನಸಭಾ ಕ್ಷೇತ್ರದ ಮಾಶ್ಯಾಳ,ಕರಜಗಿ, ಶಿರವಾಳ ಗ್ರಾಮಗಳ ಬೂತ್ ಅಧ್ಯಕ್ಷರುಗಳು, ಶಕ್ತಿಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರುಗಳ ಮನೆಯ ಮೇಲೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ಪಕ್ಷದ ಬಾವುಟ ಹಾರಿಸಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ವಿಶ್ವನಾಥ ರೇವೂರ್,ಮುಖಂಡರಾದ ರಾಜು ಜಿಡ್ಡಗಿ, ರಮೇಶ ಬಾಕೆ,ರಾಮಣ್ಣ ನಾಯ್ಕೊಡಿ,ಜ್ಯೋತಿಗೌಡ ಪಾಟೀಲ,ಸಿದ್ದು ಸಾಹುಕಾರ್, ಗೌಡಪ್ಪ ಪಾಟೀಲ, ವಿಠಲ್ ಪೂಜಾರಿ, ಭೀಮಶಾ ಯಂಗಿ, ಗೊಲ್ಲಾಳ್ ಮಲಘಾಣ, ,ಸಚೀನ ರಾಠೋಡ, ಧಾನು ಪತಾಟೆ,ಮಲ್ಲು ದೇವತ್ಕಲ,ಪ್ರಕಾಶ ಜಮಾದಾರ,ತನವೀರ ಮಣ್ಣೂರ್,ಮಂಜು ಸೊನ್ನ, ಹಾಗೂ ಬೂತ್ ಸಮಿತಿಯ ಸದಸ್ಯರು, ಪಕ್ಷದ ಕಾರ್ಯಕರ್ತರು, ಮುಖಂಡರು ಈ ವೇಳೆ ಉಪಸ್ಥಿತರಿದ್ದರು.