ನಿಡುಗುಂದಾದಲ್ಲಿ ಚೌಡಯ್ಯನವರಜಯಂತಿ ಆಚರಣೆ

ಸೇಡಂ, ಜ,21: ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ನಿಡಗುಂದಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿಯಲ್ಲಿಂದು ಶ್ರೀ ನಿಜಶರಣ
ಅಂಬಿಗರ ಚೌಡಯ್ಯನವರ 903ನೇ
ಜಯಂತಿಯ ಅಂಗವಾಗಿ ಸಂಘದ ಅಧ್ಯಕ್ಷರಾದ ಶ್ರೀ ಮುಕುಂದ ದೇಶಪಾಂಡೆ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಿದರು. ಈ ವೇಳೆ
ಉಪಾಧ್ಯಕ್ಷರಾಗಿರುವ ಶ್ರೀ ಚೆನ್ನಾರೆಡ್ಡಿ ಬಿ.
ಆಗನೂರ್ ಹಾಗೂನಿರ್ದೇಶಕರು ಮತ್ತು ಆಡಳಿತ ಮಂಡಳಿಯವರು ಮತ್ತು
ಗ್ರಾಮದ ರೈತರು, ಮುಖಂಡರು ಇದ್ದರು.