ನಿಡಗುರ್ತಿ ಗ್ರಾ.ಪಂ  ಅಧ್ಯಕ್ಷರಾದ ಕಾಳವ್ವ


ಸಂಜೆವಾಣಿ ವಾರ್ತೆ
ಸಂಡೂರು:ಅ:4: ತಾಲೂಕಿನ ನಿಡಗುರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಳವ್ವ ತಂದ ಹನುಮಂತಪ್ಪ, 73 ಹುಲಿಕುಂಟೆ ಗ್ರಾಮ ಇವರು ಅನುಸೂಚಿತ ಪಂಗಡದ ಮಹಿಳೆಯ ಮೀಸಲಾತಿ ಅಡಿಯಲ್ಲಿ 30 ತಿಂಗಳು 2ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾದ ಪದ್ದಮ್ಮ ಗಂಡ ನಲ್ಲಪ್ಪ ಕೊಂಡಾಪು ಗ್ರಾಮದ ಇವರು ಸಾಮಾನ್ಯ ವರ್ಗದ ಮೀಸಲಾತಿ ಅಡಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿಯವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮಪಂಚಾಯಿತಿ ಸಇಬ್ಬಂದಿಗಳು, ಚೋರನೂರು ಪೋಲಿಸ್ ಠಾಣೆಯ ಸಿಬ್ಬಂದಿಗಳು ಮತ್ತು ಎಲ್ಲಾ ಗ್ರಾಮಪಂಚಾಯಿತಿ ಸದಸ್ಯರು ಉಪಸ್ಥಿತರಿದು ಆಯ್ಕೆ ಮಾಡಿದರು.
ತಾಲೂಕಿನ ನಿಡಗುರ್ತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಳವ್ವ, ಉಪಾಧ್ಯಕ್ಷರಾಗಿ ಪದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದು ಅಧಿಕಾರಿ ಮಂಜುನಾಥ ರಡ್ಡಿ ಘೋಷಣೆ ಮಾಡಿದರು.