ನಿಡಗುಂದ- ಹಲಕೋಡ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲು ಆಗ್ರಹ

ಚಿಂಚೋಳಿ,ಜು.27- ತಾಲೂಕಿನ ನಿಡಗುಂದ ದಿಂದ ಹಲಕೋಡ ಗ್ರಾಮಕ್ಕೆ ಹೋಗುವ ನಿರ್ಮಾಣ ಮಾಡಿದ ಕಚ್ಚ ರಸ್ತೆ ಎರಡು ಮೂರು ತಿಂಗಳಲ್ಲಿ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯನ್ನು ಪುನರ ನಿರ್ಮಾಣ ಮಾಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವಂತೆ ಹಲಕೋಡ ಗ್ರಾಮದ ಮುಖಂಡರಾದ ಬೈನಪ್ಪ ಗುತ್ತೇದಾರ್ ಅವರು ಆಗ್ರಹಿಸಿದ್ದಾರೆ.
ಇಲ್ಲಿನ ಕಚ್ಚಾ ರಸ್ತೆಯ ಹಾಳಾಗಿದ್ದರಿಂದ ನಿಡಗುಂದ ಮತ್ತು ಹಲಕೋಡ ಗ್ರಾಮದ ದ್ವಿಚಕ್ರ ವಾಹನ ಸವಾರರಿಗೆ ಇಲ್ಲಿನ ರಸ್ತೆ ಮೇಲೆ ಓಡಾಡಲು ಬಹಳಷ್ಟು ತೊಂದರೆ ಆಗುತ್ತಿದ್ದು, ಈ ರಸ್ತೆಯು ಕಳಪೆ ಮಟ್ಟದಿಂದ ಮಾಡಿದ್ದು ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿರುವ ಅವರು, ಈ ಕಚ್ಚಾ ರಸ್ತೆಯ ನಿರ್ಮಾಣ ಮಾಡಿರುವ ಗುತ್ತೇದಾರರನ್ನು ಬ್ಲಾಕ್ ಲಿಸ್ಟಿಗೆ ಸೇರಿಸಬೇಕು ಅವರು ಆಗ್ರಹಿಸಿದ್ದಾರೆ.