ನಿಡಗುಂದ: ಕೊರೋನಾ ಸೋಂಕು ಕುರಿತು ಸಭೆ

ಚಿಂಚೋಳಿ ಏ 23: ತಾಲೂಕಿನ ನಿಡಗುಂದ ಗ್ರಾಮ ಪಂಚಾಯತನಲ್ಲಿ ಕೋವಿಡ್ 19. ಸೋಂಕು ಕುರಿತು ಸಭೆ ಜರಗಿತು.ಸಭೆ ಉದ್ದೇಶಿಸಿ ಚಿಂಚೋಳಿಯ ಶಿಶು ಅಭಿವೃದ್ಧಿ ಅಧಿಕಾರಿ ಮತ್ತು ಕೋವಿಡ್ 19. ನೋಡಲ್ ಅಧಿಕಾರಿ ಗುರುಪ್ರಸಾದ ಅವರು ಮಾತನಾಡಿ ಕಲಬುರಗಿ ಜಿಲ್ಲೆಯಲ್ಲಿ ಕೊರೋನ ವೈರಸ್ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಿಂದ ನಿಡಗುಂದಾ ಗ್ರಾಮದ ವ್ಯಾಪ್ತಿಯ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಮತ್ತು ಸ್ಯಾನಿಟಟೈಜರ್ ಅನ್ನು ಉಪಯೋಗ ಮಾಡಬೇಕು. ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗೆ ಗ್ರಾಹಕರು ಬಂದರೆ ಅಂತರ ಕಾಪಾಡಬೇಕು.ಗ್ರಾಮದ ಜನರು ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಬರಬೇಕು ಇಲ್ಲದಿದ್ದರೆ ತಮ್ಮ ತಮ್ಮ ಮನೆಯಲ್ಲೇ ಇದ್ದು ನಿಡಗುಂದಾ ಗ್ರಾಮ ಪಂಚಾಯತ ಅನ್ನು ಕೊರೋನಾ ಮುಕ್ತ ಗ್ರಾಮ ಪಂಚಾಯತ ಮಾಡಬೇಕೆಂದು ಅವರು ಹೇಳಿದರು .ಸಭೆಯಲ್ಲಿ. ನಿಡಗುಂದಾ ಗ್ರಾಮ ಪಂಚಾಯತ ಅಧ್ಯಕ್ಷ ಅರವಿಂದ ರೆಡ್ಡಿ,ಉಪಾಧ್ಯಕ್ಷ ನಿರ್ಮಲಾ ಜಗನ್ನಾಥ,ಅಭಿವೃದ್ಧಿ ಅಧಿಕಾರಿ ಸೋಮಶೇಖರ. ಗ್ರಾಪಂ.ಸದಸ್ಯರಾದ ಸಿದ್ರಾಮೇಶ ನಿಷ್ಠಿ. ಲಾಲಪ್ಪ ಕಟ್ಟಿಮನಿ. ಮತ್ತು ಅನೇಕ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ವರ್ಗದವರು ಸಭೆಯಲ್ಲಿ ಭಾಗಿಯಾದರು