ನಿಡಗುಂದಾ ಬ್ಯಾಂಕ್‍ಗೆ ಕಿಟಕಿಯಿಂದ ನುಗ್ಗಿ 62 ಲಕ್ಷ ರೂ.ಗಳಿಗೂ ಅಧಿಕ ನಗದು, ಚಿನ್ನಾಭರಣ ಲೂಟಿ

ಕಲಬುರಗಿ.ಡಿ.21: ಕಿಟಕಿಯಿಂದ ನುಗ್ಗಿ ಬ್ಯಾಂಕೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಿಡುಗಂದಾದಲ್ಲಿ ವರದಿಯಾಗಿದೆ.
ನಿಡಗುಂದಾ ಗ್ರಾಮದ ಗ್ರಾಮೀಣ ಬ್ಯಾಂಕ್‍ಗೆ ನುಗ್ಗಿ 50 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ, 12 ಲಕ್ಷ ರೂ.ಗಳಿಗೂ ಅಧಿಕ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಕಿಡಕಿಯಿಂದ ಒಳನುಗ್ಗಿದ ಖದೀಮರು ಸಿಸಿಟಿವ್ಹಿ ಕ್ಯಾಮೆರಾ ಸಂಪರ್ಕ ಕತ್ತರಿಸಿ ನಂತರ ಲಾಕರ್‍ನಲ್ಲಿದ್ದ ಹಣ, ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಸುಲೇಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.