ನಿಡಗುಂದಾ: ನಿಮ್ಮ ಮನೆ ಬಾಗಿಲಿಗೆ ಪೊಲೀಸ್ ಕಾರ್ಯಕ್ರಮ

ಚಿಂಚೋಳಿ ಅ 5: ತಾಲೂಕಿನ ನಿಡಗುಂದಾ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಪೆÇಲೀಸ್ ಇಲಾಖೆ ವತಿಯಿಂದ ಆಯೋಜಿಸಿದ ನಿಮ್ಮ ಮನೆ ಬಾಗಿಲಿಗೆ ಪೆÇಲೀಸ್ ಗ್ರಾಮ ಸಭೆ ಕಾರ್ಯಕ್ರಮಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಚಾಲನೆ ನೀಡಿದರು ನಂತರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನಿಡಗುಂದಾ ಗ್ರಾಮದಲ್ಲಿ ಒಂದು ಪೆÇಲೀಸ್ ಠಾಣೆ ನಿರ್ಮಾಣ, ಅಕ್ರಮ ಮದ್ಯಮಾರಾಟ, ಇತ್ತೀಚಿಗೆ ಹಲಕೋಡ ಗ್ರಾಮದ ಕಾಗಿಣಾ ನದಿಯಲ್ಲಿ ಹರಿದುಕೊಂಡು ಹೋಗಿರುವ ವ್ಯಕ್ತಿ ಮರಣ ಪ್ರಮಾಣ ಪತ್ರ, ಸರ್ಕಾರದ ನೀಡುವ ಪಿಎಮ್ ಕಿಸಾನ ಹಣವನ್ನು ಬಿಡಗಡೆಯಾದ ತಕ್ಷಣ ಬ್ಯಾಂಕ್ ನಿಂದ ಕಡಿತವಾಗುತ್ತಿವುದು ಹೀಗೆ ಹತ್ತಾರು ಸಮಸ್ಯೆಗಳನ್ನು ನಿಡಗುಂದಾ ಗ್ರಾಮದ ಸುತ್ತಮುತ್ತಲಿನ ಸಾರ್ವಜನಿಕರಿಂದ ಎಸ್‍ಪಿ ಇಶಾ ಪಂತ್ ಅವರು ಆಲಿಸಿದರು. ಈ ಭಾಗದಲ್ಲಿ ಓಡಾಡುವ ಕೆಲವೊಂದು ವಾಹನಗಳಿಗೆ ಅದು ಲಾರಿ ಸೇರಿದಂತೆ ಇನ್ನಿತರ ವಾಹನಗಳ ಹಿಂದುಗಡೆ ರಿಡಿರಮ್ ಇರುವದಿಲ್ಲ.ಇದರಿಂದಲೂ ಕೂಡ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರ್‍ಟಿಓ ಅವರ ಸಹಯೋಗದೊಂದಿಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನಿಡಗುಂದಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತೀ ದೊಡ್ಡದಾಗಿದ್ದು, ಇಲ್ಲಿಗೆ ಸುತ್ತಮುತ್ತಲಿನ ವಿದ್ಯಾರ್ಥಿವಿದ್ಯಾರ್ಥಿನಿಯರು ಹಾಗೂ ಶಾಲೆಯ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ ಮಕ್ಕಳಿಗೆ ಉತ್ತಮವಾದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ಸೂಕ್ತವಾದ ರೀತಿಯಲ್ಲಿ ಪೆÇಲೀಸ್ ಇಲಾಖೆಯಿಂದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ತಿಳಿಸಿದರು ಸಾರ್ವಜನಿಕರ ಸಹಕಾರದಿಂದ ಪೆÇಲೀಸ್ ಇಲಾಖೆಗೆ ಕೆಲವು ವಿಷಯಗಳ ಮಾಹಿತಿ ಸಿಗುತ್ತದೆ ಇದರಿಂದ ತಕ್ಷಣ ಪರಿಹಾರಕ್ಕೆ ಸಹಾಯವಾಗುತ್ತಿದೆ ಆದರಿಂದ ಸಾರ್ವನಿಕರು ಮುಂದೆ ಬಂದು ಯಾವುದೇ ವಿಷಯವನ್ನು ಪೊಲೀಸ್ ಇಲಾಖೆಯ 112 ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದು ಇಶಾ ಪಂತ್ ಅವರು ಸಾರ್ವಜನಿಕರಿಗೆ ತಿಳಿಸಿದರು.
ಚಿಂಚೋಳಿ ಉಪವಿಭಾಗದ ಡಿಎಸ್‍ಪಿ ಕೆ.ಬಸವರಾಜ ಪ್ರಸ್ತಾವಿಕ ಮಾತನಾಡಿದರು ಕಾರ್ಯಕ್ರಮದಲ್ಲಿ ಚಿಂಚೋಳಿ ಗ್ರೇಡ್ 2 ತಹಶಿಲ್ದಾರ ವೆಂಕಟೇಶ, ಅಬಕಾರಿ ಇಲಾಖೆ ಶರಣಮ್ಮ, ನಿಡಗುಂದಾ ಜಿಪಂ ಮಾಜಿ ಸದಸ್ಯ ಶರಣು ಮಡಿಕಲ್, ಸುಲೇಪೇಟ್ ಸರ್ಕಲ್ ಇನ್ಸ್‍ಪೆಕ್ಟರ್ ಜಗದೀಶ, ನಿಡಗುಂದಾ ಗ್ರಾಪಂ ಅಧ್ಯಕ್ಷ ಅರವಿಂದ ರೆಡ್ಡಿ ದೇಶಮುಖ, ನಿಡಗುಂದಾ ಗ್ರಾಪಂ ಸದಸ್ಯರಾದ ರಾಜು ನಿಷ್ಠಿ, ಮಂಜುನಾಥ ಮಡಿಕಲ್, ಶಂಕರ್ ಸಜ್ಜನ, ಮಹಮ್ಮದ ಖುರೇಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೋಮಶೇಖರ, ಗ್ರಾಮ ಲೆಕ್ಕಾಧಿಕಾರಿ ಉದಯಸಿಂಗ್ , ಶಿವಕುಮಾರ ನಿಡಗುಂದಾ, ಪೆÇಲೀಸ್ ಸಿಬ್ಬಂದಿಯಾದ ಮಂಜುನಾಥ್, ಹಾಗೂ ನಿಡಗುಂದಾ ಗ್ರಾಮದ ಸುತ್ತಲಿನ ಹಳ್ಳಿಗಳಾದ ಹಲಕೂಡ, ಹೂವಿನಹಳ್ಳಿ, ಶಿರೋಳಿ, ಕರ್ಚಖೇಡ್, ವೆಂಕಟ್‍ಪುರ, ವೆಂಕಟ್‍ಪುರ ತಾಂಡ, ಜಟ್ಟೂರ, ಪೆÇೀತಂಗಲ್, ಸೇರಿದಂತೆ ಬೇರೆಬೇರೆ ಗ್ರಾಮದ ಸಾರ್ವಜನಿಕರು ಭಾಗವಹಿಸಿದರು