ನಿಡಗುಂದಾ ಆರೋಗ್ಯ ಕೇಂದ್ರ ಮೇಲ್ದರ್ಜೆಗೆರಿಸಲು ಮನವಿ

ಚಿಂಚೋಳಿ,ಮಾ.1- ತಾಲೂಕಿನ ನಿಡಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸುವ ಬೇಡಿಕೆಯ ಮನವಿ ಪತ್ರವನ್ನು ತಾಲೂಕ ವೈದ್ಯಾಧಿಕಾರಿ ಡಾ. ಮಮ್ಮದ್ ಗಫರ್ ಅವರ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಲಬುರ್ಗಿ ಇವರಿಗೆ ಕರುನಾಡು ವಿಜಯ ಸೇನೆ ಹಾಗೂ ನಿಡಗುಂದಾ ಯುವಕರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕಾಧ್ಯಕ್ಷರಾದಂತ ರಾಜು ಆರ್ ಎಚ್, ಸೇಡಂ ತಾಲೂಕ ಯುವ ಘಟಕ ಅಧ್ಯಕ್ಷರಾದ ಶ್ರೀನಿವಾಸ್ ಗುತ್ತೇದಾರ್, ನಿಡಗುಂದಾ ವಲಯ ಘಟಕ ಅಧ್ಯಕ್ಷರಾದಂತ ಸಚಿನ್ ಜಜ್ಜಲ್ ಬಾರ್, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಬೆಡಕಪಳ್ಳಿ, ಸಂಪತ್ ಸಜ್ಜನ್, ಪ್ರಕಾಶ್ ನಿಷ್ಠಿ,
ರಮೇಶ್ ಕಾವಲಿಕಾರ್, ವಿಜಯ್ ಸಜ್ಜನ್, ಕೇಶವ್ ಜಡಲ್, ಶ್ರೀನಾಥ್ ಗುತ್ತೇದಾರ್,ರಾಕೇಶ್ ಚೌದ್ರಿ, ಲಕ್ಷ್ಮಿಕಾಂತ್ ಗುತ್ತೇದಾರ್, ಮಲ್ಲಿಕಾರ್ಜುನ ಸಜ್ಜನ, ಸಾಯಿ ಕುಮಾರ್ ಹಿತ್ತಲ್ ಇತರರು ಇದರು