ನಿಡಗುಂದಾದಲ್ಲಿ ಮಂತ್ರಾಕ್ಷತೆ ವಿತರಣೆ

ಚಿಂಚೋಳಿ,ಜ.14: ತಾಲೂಕಿನ ನಿಡಗುಂದಾದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ನಿಡಗುಂದಾ ಗ್ರಾಮದ ವಿವಿಧ ಬಡಾವಣೆಗಳ ಪ್ರತಿಯೊಂದು ಮನೆಗೆ ರಾಮಭಕ್ತರು ಮಂತ್ರಾಕ್ಷತೆ ಹಾಗೂ ಅಯೋಧ್ಯ ಶ್ರೀ ರಾಮ ಮಂದಿರದ ಭಾವಚಿತ್ರ ವಿತರಿಸಿದರು
ಈ ಸಂದರ್ಭದಲ್ಲಿ ಪೂಜ್ಯ ಉಮೇಶ್ವರ ಮಹಾಸ್ವಾಮಿಗಳು, ಗ್ರಾಮದ ಮುಖಂಡರಾದ ಮುಕುಂದ ದೇಶಪಾಂಡೆ, ಬಸವರಾಜ ಕಪಾಳ, ಸಂಪತ್ ಸಜ್ಜನ್, ಶರಣು ಬಿರಾದಾರ್, ಶ್ರೀನಾಥ್ ರೆಡ್ಡಿ, ದಿನೇಶರೆಡ್ಡಿ,ಅಂಬರೀಶ್ ಮಡಿವಾಳ,ರಾಕೇಶ್ ಚೌದ್ರಿ, ಶ್ರೀಕಾಂತ್ ತಳವಾರ, ರಮೇಶ ಮಡಿವಾಳ, ರಾಹುಲ್ ಕಪಾಳ ಜಗನ್ನಾಥ್ ಮಡಿವಾಳ, ಮತ್ತು ಅನೇಕ ಯುವಕರು ಇದ್ದರು