ನಿಟಾಲಿ ಕಾರ್ಯ ಶ್ಲಾಘನೀಯ-ಬೆಳ್ಳಕ್ಕಿ

ಧಾರವಾಡ ಮೇ.29-ಕೋವಿಡ್-19 ಸಮಯದಲ್ಲಿ ಜನರು ಋಣಾತ್ಮಕ ಚಿಂತನೆಯಿಂದ ಸುಗಮ ಜೀವನ ನಡೆಸಬೇಕೆಂಬ ಆಸೆಯಿಂದ ಹಿರಿಯ ವೈದ್ಯರಾದ ಡಾ.ವಿ.ಬಿ.ನಿಟಾಲಿ ಅವರು ಓದುವ ಅಭಿರುಚಿ ಜೊತೆಗೆ ಓದಗರ ಬಳಗವನ್ನು ಸೃಷ್ಟಿಸಿ ಮತ್ತು ಬರಹಾಗರರನ್ನು ಪುಸ್ತಕ ಖರೀದಿ ಮೂಲಕ ಪೆÇ್ರೀತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಆಕಾಶವಾಣಿ ನಿಲಯ ನಿರ್ದೇಶಕರಾದ ಸಿ.ಯು.ಬೆಳ್ಳಕ್ಕಿ ತಿಳಿಸಿದರು.
ಅವರು ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕಲಾ ಸ್ಪಂದನದ ವತಿಯಿಂದ ಲಾಕಡೌನ್ ನಲ್ಲಿ ಬರಹಗಾರರಿಗೆ ಪೆÇ್ರೀತ್ಸಾಹಿಸಲು ಪುಸ್ತಕ ಖರೀದಿ ಮೂಲಕ ಓದುಗರ ಬಳಗ ಸೃಷ್ಟಿಯ ಡಾ.ವಿ.ಬಿ.ನಿಟಾಲಿ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಪುಸ್ತಕ ಸ್ವೀಕರಿಸಿ ಮಾತನಾಡಿದರು. ಎಲ್ಲರ ಮನೋಭಾವನೆಯಲ್ಲಿ ಓದುವ ಅಭಿರುಚಿ ಬೆಳೆದರೆ ನಿಟಾಲಿಯರ ಕಾರ್ಯ ಸ್ವಾರ್ಥಕ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ಸುಮಾರು ನಾಲ್ಕು ದಶಕಗಳಿಂದ ಡಾ.ವಿ.ಬಿ ನಿಟಾಲಿ ಅವರು ಸಮಾಜಮುಖಿಯಾಗಿ ಕಾರ್ಯಮಾಡುತ್ತಾ ಬರಹಗಾರರಿಗೆ ಪೆÇ್ರೀತ್ಸಾಹಿಸಲು ಪುಸ್ತಕ ಖರೀದಿಯ ಮೂಲಕ ನಾಡಿಗೆ ಸಾಹಿತ್ಯದ ರುಚಿ ಉಣಬಡಿಸುತ್ತಿರುವ ಕಾರ್ಯ ಮಹತ್ವವಾದದ್ದು ಎಂದು ಹೇಳಿದರು.
ಈಗಾಗಲೇ ಮಲ್ಲಿಕಾರ್ಜುನ ಚಿಕ್ಕಮಠ, ಪ್ರೇಮಾನಂದ ಶಿಂದೆ, ಸಿ.ಯು.ಬೆಳ್ಳಕ್ಕಿ ಸೇರಿದಂತೆ ಹಲವರಿಗೆ ಪುಸ್ತಕ ನೀಡಲಾಗಿದೆ.
ಈ ಸಂದರ್ಭದಲ್ಲಿ ಕೋಶಾಧ್ಯಕ್ಷರಾದ ಪ್ರೇಮಾನಂದ ಶಿಂಧೆ, ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಎಚ್.ನಾಯಕ ದೂರವಾಣಿ ಮೂಲಕ ನಿಟಾಲಿ ಅವರ ಕಾರ್ಯವನ್ನು ಶ್ಲಾಘನೀಯ ಎಂದು ಹಾರೈಕೆ ಮಾಡಿದರು.