ನಿಜಶರಣ ಅಂಬಿಗರ ಚೌಡಯ್ಯ ಸರ್ವ ಸಮಾಜದ ಶರಣ: ಉಮೇಶ್ ಕೆ ಮುದ್ನಾಳ್

ಯಾದಗಿರಿ:ಸೆ.8: ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶ್ರವಣ ಮಾಸದ ನಿಮಿತ್ಯ ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾತನಾಡಿದ ಅವರು ನಿಜಶರಣ ಶರಣ ಅಂಬಿಗರ ಚೌಡಯ್ಯ ನವರು ಕೋಲಿ ಸಮಾಜಕ್ಕೆ ಸೀಮಿತವಲ್ಲ ಸರ್ವ ಸಮಾಜದ ಶರಣರು ಅದಕ್ಕಾಗಿ ಅವರ ತತ್ವದರ್ಷಗಳು ಮತ್ತು ವಚನಗಳು ನಾವೆಲ್ಲರೂ ದಿನನಿತ್ಯ ಪಾಲಿಸಬೇಕು.
12ನೇ ಮಾಸದಲ್ಲಿ ಶ್ರವಣಮಾಸ ಶ್ರೇಷ್ಠ ಮಾಸ ಹಾಗಾಗಿ ಪ್ರತೀ ವರ್ಷ ಶ್ರವಣಮಾಸದಲ್ಲಿ ಒಂದು ತಿಂಗಳವರೆಗೆ ನಿರಂತರ ಪೂಜೆ ಅಭಿಯಾನ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು. ಸಮಾಜದ ಬಾಂಧವರು ಈ ಅಭಿಯಾನದಲ್ಲಿ ಬಾಗಿಯಾಗಿ ಈ ಅಭಿಯಾನದಲ್ಲಿ ಪ್ರತೀಯೊಬ್ಬರು ಭಾಗವಯಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಂತಪ್ಪ ಗೊಂದೇನೂರ್ ಗುರುನಾಥರೆಡ್ಡಿ ಕಾದಲಾಪುರ್ ಭೀಮರಾಯ ಕೊಂಕಲ್ ಮಾನಪ್ಪ ಯಂಕಟಪುರ ಸಾಬರೆಡ್ಡಿ ಬಾವೂರ್ ದೇವಪ್ಪ ಬಾಗ್ಲಿ ಆಂಜನೇಯ ಬಾವೂರ್ ಮಲ್ಲಿಕಾರ್ಜುನ ಅಳಿಮನಿ ಹೊನ್ನಪ್ಪ ಕಾವಲಿ ಬಸಪ್ಪ ಟಿ ವಡಗೇರಾ ವೆಂಕಟೇಶ್ ಬಾವೂರ್ ಬಸಲಿಂಗಪ್ಪ ತೆಲುಗುರ್ ತಿಪ್ಪಣ್ಣ ಕಾವಲಿ ಬಲಪ್ಪ ವೇಕಟಪುರ ತಿಪ್ಪಣ್ಣ ಹೋದೆಡ್ ಸದಪ್ಪ ಅಳಿಮನಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.