ನಿಜಶರಣ ಅಂಬಿಗರ ಚೌಡಯ್ಯ ನಮಗೆ ಆದರ್ಶ : ಶಾಸಕ ಎಂ.ವೈ.ಪಾಟೀಲ್

ಅಫಜಲಪುರ :ಜ.22: ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿ ದಾರಿಗೆ ತರುವ ಕೆಲಸವನ್ನು ಮಾಡಿದ್ದಾರೆ, ಅವರ ಆದರ್ಶಗಳನ್ನು ಅಳವಡಿಸಿಕೊಂಡು ಎಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು ಇವರರೊಬ್ಬರು ನಮಗೆ ಆದರ್ಶ
ಅಲ್ಲದೆ ತಾಲೂಕಿನಲ್ಲಿ ಚೌಡಯ್ಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ 1ಕೋಟಿ ರೂ.ಅನುದಾನ ಬಂದಿದೆ. ನಾನು ಶಾಸಕರ ಅನುದಾನದಲ್ಲಿ 50ಲಕ್ಷ ರೂ. ಅನುದಾನ
ನೀಡಲು ಸಿದ್ಧನಿದ್ದೇನೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.ಪಟ್ಟಣದ ತಹಸೀಲ್ ಕಛೇರಿಯಲ್ಲಿ ನಡೆದ ಚೌಡಯ್ಯನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ಉತ್ತಮ ನಾಗರಿಕರನ್ನಾಗಿ ಮಾಡಬೇಕು, ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಮುಖಂಡರಾದ ಬಸವರಾಜ ಸಪ್ಪನಗೋಳ, ಉಪನ್ಯಾಸ ನೀಡಿದರು.ಶಿವಕುಮಾರ ನಾಟೀಕಾರ,ಅವ್ವಣ್ಣ ಮ್ಯಾಕೇರಿ ಮಾತನಾಡಿ
ಶರಣ ಚೌಡಯ್ಯ ನೇರ ಮತ್ತು ದಿಟ್ಟವಾಗಿ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ
ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೋಲಿ ಸಮಾಜದ ತಾಲೂಕಾಧ್ಯಕ್ಷ ಮಹಾರಾಯ ಅಗಸಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶಿವಕುಮಾರ ನಾಟಿಕಾರ, ಪ್ರಕಾಶ ಜಮಾದರ, ಗೌಡಪಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಬಸವರಾಜ ಸಪ್ಪನಗೋಳ, ಶಂಕು ಮ್ಯಾಕೇರಿ, ದುಂಡಪ್ಪ ಜಮಾದಾರ, ರಾಜಕುಮಾರ ಉಕಲಿ,ಬಸವರಾಜ ಚಾಂದಕವಟೆ, ಶಿವಶರಣಗೌಡ ಪಾಟೀಲ್, ದೇವೇಂದ್ರ ಜಮಾದಾರ, ಸಿದ್ದಾರ್ಥ ಬಸರಿಗಿಡದ, ಮಹಾಂತೇಶ ತಳವಾರ, ಸಂಗನಗೌಡ ಪಾಟೀಲ್, ಅಧಿಕಾರಿಗಳಾದ ರಮೇಶ ಸೂಲ್ಪಿ, ಮಾರುತಿ, ಹುಜರಾತಿ, ಪಂಕಜಾ ರಾವೂರ, ಎಚ್.ಎಸ್.ಗಡಗಿಮನಿ ಸೇರಿದಂತೆ ಇತರರಿದ್ದರು.
ರಾಜಕುಮಾರ ಗೌರ ನಿರೂಪಿಸಿ ವಂದಿಸಿದರು.