ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ಮಾನ್ವಿ.ಜ.೨೨- ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಟಿಸಿ ತಹಸೀಲ್ದಾರ್ ರಾಜು ಪಿರಂಗಿ ಮಾತನಾಡಿ ೧೨ ನೇ ಶತಮಾನದಲ್ಲಿ ಬಸವಾದಿಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಪ್ರಮುಖರಾದ ಶರಣರಾಗಿದ್ದರು ಅವರು ತಮ್ಮ ಅಂಬಿಗ ವೃತ್ತಿಯ ಕಾಯಕದಲ್ಲಿ ಕಂಡ ಅನುಭವಗಳನ್ನು ವಚನ ರೂಪದಲ್ಲಿ ನಮಗೆ ನೀಡಿದರೆ ಅವರ ವಚನಗಳಲ್ಲಿ ತಿಳಿಸಿದ ಸಂದೇಶಗಳನ್ನು ಪ್ರತರಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಡಾ.ಮಲ್ಲಿಕಾರ್ಜುನ ಮುಖ ನಿಜಶರಣ ಅಂಬಿಗರ ಚೌಡಯ್ಯರ ಕುರಿತು ವಿಶೆಷ ಉಪನ್ಯಾಸ ನೀಡಿ ೧೨ನೇ ಶತಮಾನದಲ್ಲಿ ಬಸವಣನವರು ನೀಡಿದ ಲಿಂಗಯಾತ ಧರ್ಮವು ದೇವಲಾಯದಿಂದ ದೇಹದವರೆಗೆ ಇಷ್ಟಲಿಂಗ ರೂಪದಲ್ಲಿ ಬಂದಿದ್ದು ಲಿಂಗಯಾತ ಧರ್ಮದ ಸೂತ್ರಗಳನ್ನು ಕಾಯುವ ಕೆಲಸವನ್ನು ಮಾಡಿದವರು ನಿಜಶರಣ ಅಂಬಿಗರ ಚೌಡಯ್ಯನವರು ಅವರ ವಚನಗಳಳಲ್ಲಿ ವೈಚಾರಿಕತೆ ಹಾಗೂ ನಿಷ್ಠುರತೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕಾರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಸಾರೋಟಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಹಾಗೂ ಸಮುದಾಯದ ಸಾಧಕರನ್ನು ತಾಲೂಕು ಆಡಳಿತವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟಿ.ಎ.ಪಿ.ಸಿ.ಎಂ.ಅಧ್ಯಕ್ಷರಾದ ತಿಮ್ಮರೆಡ್ಡಿ ಭೋಗವತಿ. ಮುಖಂಡರಾದ ಶಿವರಾಜ ನಾಯಕ, ತಾ.ಅಕ್ಷರದಾಸೋಹ ಇಲಾಖೆಯ ಅಧಿಕಾರಿ ಸುರೇಶನಾಯಕ ,ತಾ.ಸಮಾಜಕಲ್ಯಾಣಾಧಿಕಾರಿ ನಟರಾಜ, ತಾ.ಗಂಗಾಮತಸ್ಥಾರ ಸಂಘದ ಅಧ್ಯಕ್ಷ ನಾಗರಾಜ ಸೇರಿದಂತೆ ಇನ್ನಿತರರು ಭಾಗವಹಿಸಿದರು.